HEALTH TIPS

G20 ಸಭೆಯ ನಡುವೆ, ಕೇಂದ್ರ ದೆಹಲಿಯಲ್ಲಿ ಡ್ರೋನ್ ಪತ್ತೆ ಮಾಡಿದ ಪೊಲೀಸರು!

             ನವದೆಹಲಿ: G20 ಶೃಂಗಸಭೆಗೆ ವಿಶ್ವ ನಾಯಕರು ಆಗಮಿಸುತ್ತಿರುವ ಸಂದರ್ಭದಲ್ಲೇ ಕೇಂದ್ರ ದೆಹಲಿಯಲ್ಲಿ ಡ್ರೋನ್ ಪತ್ತೆಯಾಗಿದ್ದು, ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.

              ದೆಹಲಿ ಪೋಲಿಸ್ ಸಿಬ್ಬಂದಿ ಹರಸಾಹಸಪಟ್ಟು ಡ್ರೋನ್ ಹಾರಾಡುತ್ತಿದ್ದ ಸ್ಥಳಕ್ಕೆ ತೆರಳಿದ್ದು, ಅದು  ಫೋಟೋಗ್ರಾಫರ್ ಒಬ್ಬರು, ಹುಟ್ಟುಹಬ್ಬದ ಕಾರ್ಯಕ್ರಮ ಸೆರೆಹಿಡಿಯಲು ಬಳಸುತ್ತಿದ್ದ ಡ್ರೋನ್ ಎಂದು ತಿಳಿದು ಬಂದಿದೆ.

                  ಶುಕ್ರವಾರ ಸಂಜೆ ಕೇಂದ್ರ ದೆಹಲಿಯ ಪಟೇಲ್ ನಗರ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸುತ್ತಿರುವುದನ್ನು ಪೊಲೀಸ್ ನಿಯಂತ್ರಣ ಕೊಠಡಿ ಪತ್ತೆ ಮಾಡಿದೆ. ಇದು ಪೊಲೀಸರಿಗೆ ಮಾಹಿತಿ ನೀಡಿದ್ದು, ತಂಡವೊಂದು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

            ಸ್ಥಳಕ್ಕಾಗಮಿಸಿದ ನಂತರ ಅಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿರುವುದು ಕಂಡುಬಂದಿದ್ದು, ಛಾಯಾಗ್ರಾಹಕರೊಬ್ಬರು ಡ್ರೋನ್ ಬಳಸಿ ಕಾರ್ಯಕ್ರಮವನ್ನು ಸೆರೆ ಹಿಡಿಯುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

              ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

               ಭದ್ರತಾ ಕಾರಣಗಳಿಗಾಗಿ ದೆಹಲಿ ಪೊಲೀಸರು ಆಗಸ್ಟ್ 29 ರಿಂದ ಸೆಪ್ಟೆಂಬರ್ 12 ರವರೆಗೆ ದೆಹಲಿಯಲ್ಲಿ ಪ್ಯಾರಾಗ್ಲೈಡರ್‌ಗಳು, ಹ್ಯಾಂಗ್-ಗ್ಲೈಡರ್‌ಗಳು ಮತ್ತು ಹಾಟ್ ಏರ್ ಬಲೂನ್‌ಗಳಂತಹ ಉಪಕರಣಗಳ ಹಾರಾಟವನ್ನು ನಿಷೇಧಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries