ಕಾಸರಗೋಡು : ಜಿಲ್ಲೆಯಲ್ಲಿ 'ಸ್ಪೆಕ್ಟ್ರಮ್ ಉದ್ಯೋಗ ಮೇಳ 2023 -2024' 10ರಂದು ಕಾಸರಗೋಡು ಸರ್ಕಾರಿ ಐ.ಟಿ.ಐ ನಲ್ಲಿ ನಡೆಸಲಾಗುವುದು. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಐ.ಟಿ.ಐಗಳಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ ಪ್ರಶಿಕ್ಷಣಾರ್ಥಿಗಳಿಗೆ ಉದ್ಯೋಗ ಲಭ್ಯವಾಗುವಂತೆ ಈ ಮೇಳದಲ್ಲಿ ಸಾವಿರಕ್ಕೆ ಹೆಚ್ಚು ಮಂದಿ ಉದ್ಯೋಗಾರ್ಥಿಗಳು ಭಾಗವಹಿಸಲಿದ್ದು, 50ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿದೆ. ಡಿಡಬ್ಲ್ಯೂಎಂಎಸ್‍ನ ಪೆÇೀರ್ಟಲ್‍ನ ಜ್ಞಾನmissioಟಿ.ಞeಡಿಚಿಟಚಿ.gov.iಟಿ ಮೂಲಕ ನೋಂದಣಿ ನಡೆಸಬಹುದಾಗಿದೆ. ರಾಜ್ಯದ ಒಳಗೆ ಮತ್ತು ಹೊರಗಿನ ಸಂಸ್ಥೆಗಳು ಭಾಗವಹಿಸುವ ಮೇಳಗಳಲ್ಲಿ ಅನೇಕ ಉದ್ಯೋಗಾವಕಾಶಗಳು ವರದಿಯಾಗಿವೆ.
ಪ್ರತಿ ರಾಜ್ಯದಲ್ಲಿ ಕೈಗಾರಿಕಾ ತರಬೇತಿ ಇಲಾಖೆ 2017 ರಿಂದ ಜಿಲ್ಲೆಗಳಲ್ಲಿ ಸ್ಪೆಕ್ಟ್ರಮ್ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ. ಐಟಿಐನಿಂದ ಪದವಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಸೂಕ್ತ ಉದ್ಯೋಗ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ತಾಂತ್ರಿಕ ಜ್ಞಾನವನ್ನು ಹೊಂದಿರುವ ನುರಿತ ಕೆಲಸಗಾರರನ್ನು ಒದಗಿಸಿಕೊಡುವ ಉದ್ದೇಶದಿಂದ ಸ್ಪೆಕ್ಟ್ರಮ್ ಉದ್ಯೋಗ ಮೇಳಗಳನ್ನು ತರಬೇತಿ ಇಲಾಖೆ ಆಯೋಜಿಸುತ್ತದೆ. ಉದ್ಯೋಗ ಮೇಳ ಸಂಪೂರ್ಣವಾಗಿ ರಾಜ್ಯ ಸರ್ಕಾರದ ವೆಚ್ಚದಲ್ಲಿ ನಡೆಯುತ್ತಿದೆ.
ಸ್ಪೆಕ್ಟ್ರಮ್ 2023-2024 ಉದ್ಯೋಗ ಮೇಳದ ಉದ್ಘಾಟನೆಯನ್ನು ಅ. 10ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಸರಕಾರಿ ಐ.ಟಿ.ಐ ಸಭಾಂಗಣದಲ್ಲಿ ಕಾಸರಗೋಡು ಶಾಸಕ ಎನ್. ಎ ನೆಲ್ಲಿಕುನ್ನು ನಿರ್ವಹಿಸುವರು. ನಗರಸಭಾ ಅಧ್ಯಕ್ಷ ವಿ.ಎಂ ಮುನೀರ್ ಅಧ್ಯಕ್ಷತೆ ವಹಿಸುವರು. ಸಮಸದ ರಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.