ಕುಂಬಳೆ: ಮಶ್ಹೂರ್ ಮಜ್ಲಿಸ್ ಮತ್ತು ನೂರ್ ಅಜ್ಮೀರ್ ಸದಸ್ ಅಕ್ಟೋಬರ್ 10 ರಂದು ಮೊಗ್ರಾಲ್ ಪೆರ್ವಾಡ್ ಎಸ್ಸಾ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಮಶ್ಹೂರ್ ಅಲ್ ಮದೀನ ಫೌಂಡೇಶನ್ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಪೋರಂನಲ್ಲಿ ನಿನ್ನೆ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾರಂಭದ ಅಂಗವಾಗಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಅಲ್ ಬಿರ್ ಮಕ್ಕಳ ಕಲಾ ಪ್ರದರ್ಶನ ನಡೆಯಲಿದೆ, ಸಂಜೆ 7ರಿಂದ ಖ್ಯಾತ ವಿದ್ವಾಂಸ ವಲಿಯುದ್ದೀನ್ ಫೈಝಿ ವಾಜಕಾದಿನ್ ನೇತೃತ್ವದಲ್ಲಿ ನೂರ್ ಅಜ್ಮೀರ್ ಆಧ್ಯಾತ್ಮಿಕ ಕೂಟ ನಡೆಯಲಿದೆ.
ಸೈಯದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್ ಉದ್ಘಾಟಿಸುವರು. ಸೈಯದ್ ಹಾದಿ ತಂಙಳ್ ಅಲ್ ಮಶ್ಹೂರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸೈಯದ್ ಹುಸೈನ್ ಅಲ್ ಹೈದ್ರೋಝಿ ವಳಂಚೇರಿ ಪ್ರಾರ್ಥನೆಯನ್ನು ನೆರವೇರಿಸಲಿದ್ದಾರೆ. ಸಮಸ್ತ ಉಪಾಧ್ಯಕ್ಷ ಯು.ಎಂ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅಭಿನಂದನಾ ಭಾಷಣ ಮಾಡಲಿದ್ದು, ಹುಸೈನ್ ದಾರಿಮಿ ರಾಂಚಲಾಡಿ ಮುಖ್ಯ ಭಾಷಣ ಮಾಡುವರು.
ನೂರ್ ಅಜ್ಮೀರ್ ಸದಸ್ ವಲಿಯುದ್ದೀನ್ ಫೈಝಿ ವಾಜಕಾಡ್ ನೇತೃತ್ವ ವಹಿಸಲಿದ್ದಾರೆ.
ಮಶ್ಹೂರ್ ಮಜ್ಲಿಸ್ ನಲ್ಲಿ ಸೈಯದ್ ಅಬೂಬಕರ್ ಬಾಫಕಿ ತಂಙಳ್ ಕೊಯಿಲಾಂಡಿ, ಸೈಯದ್ ಮುಹಮ್ಮದ್ ತಂಙಳ್ ಮದನಿ ಮೊಗ್ರಾಲ್, ಸೈಯದ್ ಎಂ.ಎಸ್ ತಂಙಳ್ ಮದನಿ ಒಳಮುಂಡ, ಸೈಯದ್ ಫಜಲ್ ಕೋಯಮ್ಮ ತಂಙಳ್ ಕುನ್ನುಮ್ಕೈ, ಸೈಯದ್ ತ್ವಾಹ ತಂಙಳ್ ಅಲ್ ಮಶ್ಹೂರ್ ಮೊಗ್ರಾಲ್, ಸೈಯದ್ ಯಹ್ಯಾ ತಂಙಳ್ ಕುಂಬೋಳ್, ಸೈಯದ್ ಮುಕ್ತಾರ್ ತಂಙಳ್ ಕುಂಬೋಳ್, ಸೈಯದ್ ಹಮೀದ್ ತಂಙಳ್ ಉದ್ಯಾವರ, ಸೈಯದ್ ಕೊಯಂಜಿ ತಂಙಳ್ ನುಳ್ಳಿಪಾಡಿ, ಸೈಯದ್ ಫಾರೂಕ್ ತಂಙಳ್ ಅಡೂರು, ಸೈಯದ್ ಸೈಫುಲ್ಲಾ ತಂಙಳ್ ಉದ್ಯಾವರ, ಸೈಯದ್ ಮುಲ್ಲಕೋಯ ತಂಙಳ್ ಮಾಣಿಕೋತ್, ಸೈಯದ್ ಕೋಯಮ್ಮ ತಂಙಳ್ ಮೊಗ್ರಾಲ್, ಸೈಯದ್ ಪೂಕುಂಜಿ ತಂಙಳ್ ನುಳ್ಳಿಪಾಡಿ, ಸೈಯದ್ ಹಮೀದ್ ತಂಙಳ ಅಡೂರು ಮುಂತಾದ ಗಣ್ಯಾತಿಗಣ್ಯರು ಭಾಗವಹಿಸುವರು. ಡಾ.ಸಯ್ಯದ್ ಖಾಸಿಂ ತಂಗಳ್ ನೇತೃತ್ವ ವಹಿಸುವರು.
ವಲಿಯುದ್ದೀನ್ ಫೈಝಿ ವಾಜಕಾಡ್ ನೇತೃತ್ವದಲ್ಲಿ ನೂರ್ ಅಜ್ಮೀರ್ ಸಮಾವೇಶ ನಡೆಯಲಿದೆ. ಉಮರ್ ಹುದವಿ ಪೂಲಪದವು, ಜಬ್ಬಾರ್ ಅಶ್ರಫಿ, ರಹಮತುಲ್ಲಾ ಮದನಿ, ಅಬ್ದುಸಲಾಂ ವಾಫಿ ವಾವೂರು, ಅಶ್ರಫ್ ಫೈಝಿ, ಯಾಕೂಬ್ ದಾರಿಮಿ, ಜಬ್ಬಾರ್ ಅಸ್ಶಾಫಿ, ಮುಹಮ್ಮದ್ ಕುಂಞÂ, ಹನೀಫಿ, ಕೆ.ಎಲ್. ಅಬ್ದುಲ್ ಖಾದಿರ್ ಅಲ್ ಖಾಸಿಮಿ, ಮುಹಮ್ಮದ್ ಫೈಝಿ ಮಾವಿನಕಟ್ಟಾ, ಯೂಸುಫ್ ಅಶ್ರಫಿ, ನಾಸಿರ್ ಅಸ್ಶಾಫಿ, ರಿಫಾಯಿ ಅಮಾನಿ, ಅಬೂಬಕರ್ ಸಿದ್ದೀಕ್ ಸಅದಿ, ಮುಹುದ್ದೀನ್ ಹನೀಫಿ, ಉಸ್ಮಾನ್ ದಾರಿಮಿ, ಇಬ್ರಾಹಿಂ ಮುಂಡಿತ್ತಡ್ಕ ಮಾತನಾಡುವರು. ಪತ್ರಿಕಾಗೋಷ್ಠಿಯಲ್ಲಿ
ಸೈಯದ್ ಹಾದಿ ತಂಙಳ್ ಅಲ್ ಮಶ್ಹೂರ್, ಸೈಯದ್ ಹಮ್ದುಲ್ಲಾ ತಂಙಳ್ ಅಲ್ ಮಶ್ಹೂರ್ ಮಾಹಿತಿ ನೀಡಿದರು..