ಪತ್ತನಂತಿಟ್ಟ: ಶಬರಿಮಲೆ ಯಾತ್ರಾ ಮಾರ್ಗಗಳ ಸ್ವಚ್ಛತೆಗೆ 1,000 ವಿಶುದ್ದಿ(ಪವಿತ್ರ) ಸೇನಾ ಸದಸ್ಯರನ್ನು ನಿಯೋಜಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಮಾಹಿತಿ ನೀಡಿದರು.
ಶಬರಿಮಲೆ ನೈರ್ಮಲ್ಯ ಸೊಸೈಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಈ ಬಗ್ಗೆ ಮುನ್ಸೂಚನೆ ನೀಡಿದರು. ಸನ್ನಿಧಾನ, ಪಂಬಾ, ನಿಲಕ್ಕಲ್, ಪಂದಳಂ ಮತ್ತು ಕುಳನಾಡದಲ್ಲಿ ತೀರ್ಥಯಾತ್ರೆಯ ಮಾರ್ಗಗಳನ್ನು ಸ್ವಚ್ಛಗೊಳಿಸಲು ವಿಶುದ್ದಿ ಸೇನಾ ಸದಸ್ಯರನ್ನು ನಿಯೋಜಿಸಲಾಗುವುದು.
ಅವರು ಸಂಗ್ರಹಿಸಿದ ತ್ಯಾಜ್ಯವನ್ನು ಸಂಸ್ಕರಣಾ ಸ್ಥಳಕ್ಕೆ ಸಾಗಿಸಲು 14 ಟ್ರ್ಯಾಕ್ಟರ್ ಟ್ರೈಲರ್‍ಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಸನ್ನಿಧಾನ ಮತ್ತು ಪಂಬಾದಲ್ಲಿ ಮೂರು ಟ್ರ್ಯಾಕ್ಟರ್‍ಗಳು ಇರುತ್ತವೆ. ನಿಲಕ್ಕಲ್‍ನಲ್ಲಿ ಎಂಟು ಟ್ರ್ಯಾಕ್ಟರ್‍ಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ವಿಶುದ್ದಿ ಸೇನಾ ಸ್ವಯಂಸೇವಕರಿಗೆ ಕಳೆದ ವರ್ಷ 450 ರೂ.ಪಾವತಿ ಮಾಡಲಾಗಿತ್ತು. ಈ ವರ್ಷವೂ ವೇತನ ಪರಿಷ್ಕರಣೆಗೆ ಶಿಫಾರಸು ಮಾಡಲಾಗುವುದು. ಅವರಿಗೆ ಪ್ರಯಾಣ ಭತ್ಯೆಯಾಗಿ 1,000 ರೂ.ನೀಡಲು ಚಿಂತನೆ ಇದೆ ಎಂದಿರುವರು.
ವಿಶುದ್ದಿ(ಪವಿತ್ರ) ಸೇನಾ ಸಿಬ್ಬಂದಿಯ ಕಾರ್ಯಕ್ಷಮತೆ ಮತ್ತು ಯೋಗಕ್ಷೇಮವನ್ನು ನಿರ್ಣಯಿಸಲು ಕಲ್ಯಾಣ ಅಧಿಕಾರಿಯನ್ನು ಸಹ ನೇಮಿಸಲಾಗುವುದು. ಅವರಿಗೆ ಅಗತ್ಯ ವಸ್ತುಗಳನ್ನು ನೇರವಾಗಿ ಸರ್ಕಾರಿ ಸಂಸ್ಥೆಗಳಿಂದಲೇ ಖರೀದಿಸಲು ಸೂಚಿಸಲಾಗಿದೆ ಎ0ದು ಡಿಸಿ ತಿಳಿಸಿರುವರು.