ಮುಂಬೈ: 2007ರಲ್ಲಿ ಮುಂಬೈನ ವೈದ್ಯರೊಬ್ಬರು ಲಂಚ ರೂಪದಲ್ಲಿ ಪಡೆದಿದ್ದ ₹100 ಆಗಲೇ ಸಣ್ಣ ಮೊತ್ತವಾಗಿದ್ದು, ಈಗ ಅದರ ಬೆಲೆ ಇನ್ನೂ ಕಡಿಮೆ ಎಂದು ಅಭಿಪ್ರಾಯಪಟ್ಟ ಬಾಂಬೆ ಹೈಕೋರ್ಟ್, ಸರ್ಕಾರಿ ವೈದ್ಯರೊಬ್ಬರನ್ನು ಭ್ರಷ್ಟಾಚಾರ ಪ್ರಕರಣದಿಂದ ಖುಲಾಸೆಗೊಳಿಸಿದೆ.

2012ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ವೈದ್ಯಾಧಿಕಾರಿಯನ್ನು ಖುಲಾಸೆಗೊಳಿಸಿತ್ತು.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪೌಡೆ ಗ್ರಾಮದ ನಿವಾಸಿ ಎಲ್. ಟಿ ಪಿಂಗಳೆ ಎಂಬುವವರು ವೈದ್ಯಾಧಿಕಾರಿ ಡಾ.ಅನಿಲ್ ಶಿಂಧೆ ಅವರು ತಮ್ಮ ಬಳಿ ₹100 ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಶಿಂಧೆ ಅವರು ಹಣ ಪಡೆಯುವಾಗಲೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿತ್ತು.
'2007ರಲ್ಲಿ ₹100 ಲಂಚವನ್ನು ಸ್ವೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ. 2007ರಲ್ಲೇ ಈ ಮೊತ್ತ ತುಂಬಾ ಸಣ್ಣ ಮೊತ್ತವಾಗಿದ್ದು, ಈಗ ಅದರ ಬೆಲೆ ಇನ್ನೂ ಕಡಿಮೆಯಾಗಿದೆ. ಇದೊಂದು ಕ್ಷುಲ್ಲಕ ಪ್ರಕರಣವೆಂದು ಪರಿಗಣಿಸಬಹುದಾಗಿದೆ' ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.