ಲಾಹೋರ್: ನಿಷೇಧಿತ ಐಎಸ್ ಹಾಗೂ ಅಲ್‌ಕೈದಾ ಭಯೋತ್ಪಾದಕ ಸಂಘಟನೆಗಳ ಶಂಕಿತ 10 ಉಗ್ರರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶನಿವಾರ ಬಂಧಿಸಿರುವ ಪೊಲೀಸರು, ಪ್ರಮುಖ ಭಯೋತ್ಪಾದಕ ದಾಳಿಯನ್ನು ತಡೆಗಟ್ಟಿದ್ದಾರೆ.
ಲಾಹೋರ್: ನಿಷೇಧಿತ ಐಎಸ್ ಹಾಗೂ ಅಲ್‌ಕೈದಾ ಭಯೋತ್ಪಾದಕ ಸಂಘಟನೆಗಳ ಶಂಕಿತ 10 ಉಗ್ರರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶನಿವಾರ ಬಂಧಿಸಿರುವ ಪೊಲೀಸರು, ಪ್ರಮುಖ ಭಯೋತ್ಪಾದಕ ದಾಳಿಯನ್ನು ತಡೆಗಟ್ಟಿದ್ದಾರೆ.
'ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿ ದೊರೆತ ಮಾಹಿತಿಯನ್ನಾಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ 117 ಜನರನ್ನು ವಿಚಾರಣೆಗೊಳಪಡಿಸಿದ್ದು, ಇದರಲ್ಲಿ ಶಂಕಿತ 10 ಭಯೋತ್ಪಾದಕರನ್ನು ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ನಿಷೇಧಿತ ಸಾಮಗ್ರಿಗಳೊಂದಿಗೆ ಬಂಧಿಸಲಾಗಿದೆ' ಎಂದು ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ತಿಳಿಸಿದೆ.
'ಐಎಸ್, ಅಲ್‌ಕೈದಾ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ಲಷ್ಕರ್-ಎ-ಜಾಂಗ್ವಿ ಹಾಗೂ 313 ಬ್ರಿಗೇಡ್ ಸಂಘಟನೆಗಳ ಭಯೋತ್ಪಾದಕರನ್ನು ಲಾಹೋರ್, ರಹೀಮ್ ಯಾರ್ ಖಾನ್, ಸರಗೋಧಾ ಮತ್ತು ಬಹಾವಲಪುರದಲ್ಲಿ ಬಂಧಿಸಲಾಗಿದೆ. 12 ಕೋಟಿ ಜನಸಂಖ್ಯೆಯುಳ್ಳ ಪಂಬಾಜ್ ಪ್ರಾಂತ್ಯದಲ್ಲಿ ಇವರು ವಿಧ್ವಂಸಕ ಕೃತ್ಯ ಎಸಗುವ ಯೋಜನೆ ಹೊಂದಿದ್ದರು' ಎಂದು ಸಿಟಿಡಿ ಹೇಳಿದೆ.
ಎರಡು ಐಇಡಿ ಬಾಂಬ್, ಒಂದು ಹ್ಯಾಂಡ್ ಗ್ರೆನೇಡ್, ಮೂರು ಡಿಟೋನೇಟರ್ ಸೇರಿದಂತೆ ವಿವಿಧ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.