ಮುಳ್ಳೇರಿಯ: ಪೆರಿಯ ಆಲಕ್ಕೋಡ್ ಗೋಕುಲಂ ಗೋಶಾಲೆಯಲ್ಲಿ ದೀಪಾವಳಿ ಸಂಗೀತೋತ್ಸವ ನವಂಬರ್ 10ರಿಂದ 19ರ ತನಕ ನಡೆಯಲಿರುವುದು. ಸಂಗೀತೋತ್ಸವದ ಸಂಘಟನಾ ಸಮಿತಿಯನ್ನು ರೂಪಿಸಲಾಯಿತು. ಪ್ರಮೋದ್ ಕುಮಾರ್ ಪೆರಿಯ, ಟಿ.ರಾಮಕೃಷ್ಣನ್, ಎ.ದಾಮೋದರನ್, ಪಿ.ವಿ ಪದ್ಮರಾಜನ್ ಮಾತನಾಡಿದರು. ಪದಾಧಿಕಾರಿಗಳಾಗಿ ವಿಷ್ಣುಪ್ರಸಾದ್ ಹೆಬ್ಬಾರ್, ವಿನೋದ್ ಕೃಷ್ಣನ್, ಮೃದುಲ ಪೈ, ಪಲ್ಲವ ನಾರಾಯಣನ್ ಆಯ್ಕೆಯಾದರು. ಪ್ರಾತಃಕಾಲದಿಂದ ರಾತ್ರಿಯ ತನಕ ಗೋವುಗಳ ಮುಂಭಾಗದಲ್ಲಿ ನಿರಂತರ ಸಂಗೀತಾರ್ಚನೆ ನಡೆಯಲಿದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ಮೊದಲಾದೆಡೆಗಳಿಂದ ಪ್ರಸಿದ್ಧ ಸಂಗೀತಗಾರರು ತಮ್ಮ ಸಂಗೀತ ಸೇವೆಯನ್ನು ನೀಡಲಿದ್ದಾರೆ.