ತಿರುವನಂತಪುರಂ: ರಾಜ್ಯದಲ್ಲಿ 11 ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಆರು ಜಿಲ್ಲೆಗಳಲ್ಲಿ ಮೇಲ್ಸೇತುವೆ ಬರಲಿದೆ ಎಂದು ಸಚಿವ ಕೆ.ಎನ್.ಬಾಲಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಣ್ಣೂರು ಕಣ್ಣಪುರಂ, ಚೆರುಕುನ್ನು, ಮುಝುಪುಲಂಗಾಡ್ ಬೀಚ್, ಮುಕ್ಕಂ, ತ್ರಿಶೂರ್ ವೆಲಕುಟ್ಟಿ/ಅತೂರ್ ಗೇಟ್, ಒಲ್ಲೂರ್, ಕೋಝಿಕ್ಕೋಡ್ ನ ವೆಲ್ಲಾಯಿಲ್, ಕೊಟ್ಟಾಯಂ ಕೊತ್ತನಲ್ಲೂರು, ಕೊಲ್ಲಂ ಎಡಕುಳಂಗರ, ಪೊಲಯಾತೋಟ್ ಮತ್ತು ತಿರುವನಂತಪುರಂ ಅಝೂರ್ ಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು.
ಇದೇ ವೇಳೆ ಮೇಲ್ಸೇತುವೆ ಅಗತ್ಯವಿರುವಲ್ಲಿ ಭೂಸ್ವಾಧೀನ ಹಾಗೂ ಸೇತುವೆ ನಿರ್ಮಾಣಕ್ಕೆ 77.65 ಕೋಟಿ ರೂ.ಮೀಸಲಿಡಲಾಗಿದೆ. ಇದರಲ್ಲಿ ಈ ಹಿಂದೆ 48.38 ಕೋಟಿ ರೂ. ಅನುಮತಿಸಲಾಗಿತ್ತು. ಆದರೆ 34.26 ಕೋಟಿ ರೂಪಾಯಿ ಮೀಸಲಿಟ್ಟರೆ ಯೋಜನೆಗಳನ್ನು ಅನುμÁ್ಠನಗೊಳಿಸಬಹುದು ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.