ಕಾಸರಗೋಡು : ಕೋ ಆಪರೇಟಿವ್ ಟೌನ್ ಬ್ಯಾಂಕ್ 111ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾಸರಗೋಡು ಟೌನ್‍ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು. ಆರ್ ಎಸ್ ಎಸ್ ಅಖಿಲ ಭಾರತೀಯ ಕುಟುಂಬ ಪ್ರಬೋಧನ ಕಾರ್ಯಕಾರಿ ಸಮಿತಿ ಸದಸ್ಯ ಕಜಂಬಾಡಿ ಸುಬ್ರಮಣ್ಯ ಭಟ್ ಸಮಾರಂಭ ಉದ್ಘಾಟಿಸಿದರು.
ಬ್ಯಾಂಕ್ ಅಧ್ಯಕ್ಷ ವಕೀಲ ಎ.ಸಿ ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಸಿಬ್ಬಂದಿ ಸಂಘದ ಅಧ್ಯಕ್ಷ ವಕೀಲ, ಪಿ. ಮುರಳೀಧರನ್, ವಕೀಲ ಕರುಣಾಕರನ್ ನಂಬಿಯಾರ್ ಉಪಸ್ಥಿತರಿದ್ದರು.
ಬ್ಯಾಂಕ್ ಸಿಬ್ಬಂದಿ, ಮೌಲ್ಯಮಾಪಕರು ಮತ್ತು ದೈನಂದಿನ ವಸೂಲಾತಿ ಏಜೆಂಟರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷ ಕೆ. ಮಾಧವ ಹೇರಳ ಸ್ವಾಗತಿಸಿದರು. ಬ್ಯಾಂಕ್ ಎಜಿಎಂ ಸಿ. ಉನ್ನಿಕೃಷ್ಣನ್ ವಂದಿಸಿದರು.