ನವದೆಹಲಿ: 2000 ರೂಪಾಯಿ ಮುಖಬೆಲೆಯ 12 ಸಾವಿರ ಕೋಟಿ ರೂಪಾಯಿ ಮೌಲ್ಯದ ನೋಟುಗಳು ರಿಸರ್ವ್ ಬ್ಯಾಂಕ್ ಗೆ ವಾಪಸ್ ಬರಬೇಕಿವೆ ಎಂದು ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಈ ವರೆಗೂ ಶೇ.87 ರಷ್ಟು 2,000 ರೂ ಮುಖಬೆಲೆಯ ನೋಟುಗಳು ವಾಪಸ್ ಕೇಂದ್ರೀಯ ಬ್ಯಾಂಕ್ ಗೆ ವಾಪಸ್ ಬಂದಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದು ಉಳಿದ ಪ್ರಮಾಣದ ನೋಟುಗಳನ್ನು ಬೇರೆಡೆ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿತ್ತಿಯ ನೀತಿ ಪ್ರಕಟಿಸಿ ಮಾತನಾಡಿದ ಗೌರ್ನರ್ ಶಕ್ತಿಕಾಂತ್ ದಾಸ್, ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ಪೈಕಿ 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ವಾಪಸ್ಸಾಗಿದ್ದು 12,000 ಕೋಟಿ ಮೌಲ್ಯದಷ್ಟು ನೋಟುಗಳು ವಾಪಸ್ಸಾಗಬೇಕಿವೆ. ಇದು ಮೇ.19,2023 ವರೆಗಿನ ಅಂಕಿ-ಅಂಶವಾಗಿದೆ ಎಂದು ಹೇಳಿದ್ದಾರೆ. 2,000 ರೂಪಾಯಿ ಮುಖಬೆಲೆಯ ನೋಟುಗಳ ವಾಪಸಾತಿಗೆ ಕೇಂದ್ರೀಯ ಬ್ಯಾಂಕ್ ಅವಧಿಯನ್ನು ಒಂದು ವಾರದವರೆಗೆ ವಿಸ್ತರಿಸಿದೆ.