ಬದಿಯಡ್ಕ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‍ನ ವಾರ್ಷಿಕ ಮಹಾಸಭೆ ಬ್ಯಾಂಕ್‍ನ ಪ್ರಧಾನ ಕಚೇರಿ ಮವ್ವಾರಿನಲ್ಲಿ ಶನಿವಾರ ನಡೆಯಿತು.
ಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನು ಬ್ಯಾಂಕ್‍ನ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸದಸ್ಯರಿಗೆ ಶೇ.12 ಲಾಭಾಂಶ ಬ್ಯಾಂಕ್‍ನ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ ಘೋಷಿಸಿದರು.
ಬ್ಯಾಂಕ್‍ನ ಕಾರ್ಯದರ್ಶಿ ಮಾಧವ ಶರ್ಮಾ ಕುರುಮುಜ್ಜಿ ವರದಿ ವಾಚಿಸಿದರು. ಸಹ ಕಾರ್ಯದರ್ಶಿ ಲೋಕೇಶ್ ರೈ ಲೆಕ್ಕಪತ್ರ ಮಂಡಿಸಿದರು. ಸುಧಾಮ ಗೋಸಾಡ ವಂದಿಸಿದರು.
ಬ್ಯಾಂಕ್‍ನ ಉಪಾಧ್ಯಕ್ಷ ಶ್ರೀಧರ ಭಟ್, ನಿರ್ದೇಶಕರುಗಳಾದ ಕೃಷ್ಣಮೂರ್ತಿ, ಕೊರಗಪ್ಪ ಬೆಳ್ಳಿಗೆ, ಜಯಪ್ರಕಾಶ ಶೆಟ್ಟಿ, ರಾಮಕೃಷ್ಣ ಭಟ್ ಮವ್ವಾರ್, ಹರಿಪ್ರಸಾದ್ ರೈ, ಲತಾ ಕುಣಿಕುಳ್ಳಾಯ, ಶಾಂತಾ ಕುಮಾರಿ, ಜಯಂತಿ ರೈ, ಸುಧಾಮ ಗೋಸಾಡ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.