ನವದೆಹಲಿ :ಗುರುವಾರ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ 2023 ರಲ್ಲಿ ಭಾರತ ಜಗತ್ತಿನ 125 ದೇಶಗಳ ಪೈಕಿ 111ನೇ ಸ್ಥಾನ ಪಡೆದಿದೆ. ಆದರೆ ಈ ರ್ಯಾಂಕಿಂಗ್ ಬಗ್ಗೆ ಆಕ್ಷೇಪಿಸಿರುವ ಭಾರತ ಸರ್ಕಾರ ಅದು ದೋಷದಿಂದ ಕೂಡಿದೆ ಮತ್ತು ದುರುದ್ದೇಶ ಹೊಂದಿದೆ ಎಂದು ಹೇಳಿದೆ.

ಗುರುವಾರ ಬಿಡುಗಡೆಗೊಂಡ ಸೂಚ್ಯಂಕದಲ್ಲಿ ಭಾರತಕ್ಕೆ 28.7 ಅಂಕಗಳು ದೊರಕಿದ್ದು ದೇಶದಲ್ಲಿ ಹಸಿವಿನ ಪ್ರಮಾಣದ ಗಂಭೀರತೆಯನ್ನು ಇದು ಸೂಚಿಸಿದೆ. ಈ ಸೂಚ್ಯಂಕದಲ್ಲಿ ನೆರೆಯ ದೇಶಗಳಾದ ಪಾಕಿಸ್ತಾನ 102ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 81ನೇ ಸ್ಥಾನದಲ್ಲಿ, ನೇಪಾಳ 69ನೇ ಸ್ಥಾನದಲ್ಲಿ ಮತ್ತು ಶ್ರೀಲಂಕಾ 60ನೇ ಸ್ಥಾನದಲ್ಲಿವೆ.
ಭಾರತದಲ್ಲಿ ಅಪೌಷ್ಠಿಕಾಂಶದ ಕೊರತೆಯು ಶೇ 16.6 ರಷ್ಟಿದ್ದರೆ ಐದು ವರ್ಷದ ಕೆಳಗಿನ ಮಕ್ಕಳ ಮರಣ ಪ್ರಮಾಣ ಶೇ 3.1 ಇದೆ. ಹದಿನೈದು ಮತ್ತು 24 ವರ್ಷ ಪ್ರಾಯದ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಮಾಣ ಶೇ 58.1ರಷ್ಟಿದೆ ಎಂದು ವರದಿ ಹೇಳಿದೆ.
ಈ ಜಾಗತಿಕ ಹಸಿವಿನ ಸೂಚ್ಯಂಕವನ್ನು ತಿರಸ್ಕರಿಸಿರುವ ಭಾರತ ಸರ್ಕಾರ, ಹಸಿವನ್ನು ಮಾಪನ ಮಾಡುವ ಕ್ರಮ ದೋಷಪೂರಿತವಾಗಿದೆ ಹಾಗೂ ಭಾರತದ ವಾಸ್ತವ ಚಿತ್ರಣವನ್ನು ಬಿಂಬಿಸುವುದಿಲ್ಲ ಎಂದು ಹೇಳಿದೆ.
ಈ ಸೂಚ್ಯಂಕ ಸಿದ್ಧಪಡಿಸಿದ ರೀತಿಯಲ್ಲಿ ಹಲವು ದೋಷಗಳಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆ.
2022 ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 121 ದೇಶಗಳ ಪಟ್ಟಿಯಲ್ಲಿ ಭಾರತ 107ನೇ ಸ್ಥಾನ ಪಡೆದಿತ್ತು.