ಕಾಸರಗೋಡು: ಗಾಂಧೀಜಿಯವರ 154 ನೇ ಜನ್ಮದಿನಾಚರನೆ ಅಂಗವಾಗಿ ಆಯೋಜಿಸುತ್ತಿರುವ ಗಾಂಧಿಜಯಂತಿ ಸಪ್ತಾಹವನ್ನು ಖಾದಿ ಮಂಡಳಿಯು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದೆ. ಇದರ ಅಂಗವಾಗಿ ಪ್ರೌಢಶಾಲೆ-ಹೈಯರ್ ಸೆಕೆಂಡರಿ ಶಾಲೆ ಆಧಾರಿತ (ಎಂಟರಿಂದ ರಿಂದ 12 ರವರೆಗೆ) ವಿದ್ಯಾರ್ಥಿಗಳಿಗಾಗಿ ಕಾಂಞಂಗಾಡ್ ಮಾವುಂಗಾಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಸರಗೋಡು ಜಿಲ್ಲಾ ಖಾದಿ ಗ್ರಾಮೋದ್ಯೋಗ ಕಛೇರಿಯಲ್ಲಿ ಅಕ್ಟೋಬರ್ 12 ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಮಟ್ಟದ ಕ್ವಿಜ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
'ಗಾಂಧಿಜೀಯೂ ಖಾದಿಯೂ ಮತ್ತು ಸ್ವಾತಂತ್ರ್ಯ ಹೋರಾಟವೂ' ಎಂಬ ವಿಷಯದ ಬಗ್ಗೆ ಕ್ವಿಜ್ ಸ್ಪರ್ಧೆ ನಡೆಯಲಿದೆ. ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಶಾಲಾ ಅಧಿಕಾರಿಗಳ ದೃಢೀಕರಣ ಪತ್ರದ ಮೂಲಕ ಜಿಲ್ಲಾ ಖಾದಿ ಗ್ರಾಮೋದ್ಯೋಗ ಕಚೇರಿಯನ್ನು ಸಂಪರ್ಕಿಸಬೇಕು. ಭಾಗವಹಿಸುವವರು ಅಕ್ಟೋಬರ್ 10ರ ಒಳಗೆ ಹೆಸರು ನೊಂದಾಯಿಸಬೇಕು. ಪ್ರಥಮ, ದ್ವಿತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಸರ್ಟಿಫಿಕೇಟ್ ವಿತರಿಸಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (0467 2200585, 9497854529)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.