ತಿರುವನಂತಪುರಂ: ಕಲಮಸ್ಸೆರಿ ಯೆಹೋವನ ಸಾಕ್ಷಿ ಸಮಾವೇಶದ ವೇಳೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಗಾಯಾಳುಗಳು ವೈದ್ಯಕೀಯ ಕಾಲೇಜು ಮತ್ತು ಇತರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ 12 ಮಂದಿ ಐಸಿಯುನಲ್ಲಿದ್ದಾರೆ ಎಂದು ಸಚಿವರು ಹೇಳಿದರು.
ಇಂದು ಮುಂಜಾನೆ ಸಾವನ್ನಪ್ಪಿದ ಬಾಲಕಿಯ ತಾಯಿ ಮತ್ತು ಸಹೋದರ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದವರನ್ನು ರಾತ್ರಿ ವೇಳೆಗೆ ಬಿಡುಗಡೆ ಮಾಡಲಾಯಿತು. ಘಟನೆ ನಡೆದ ಸ್ಥಳದಲ್ಲಿ ಮೃತ ಮಹಿಳೆಯ ಸಂಬಂಧಿಯ ಡಿಎನ್‍ಎ ಪರೀಕ್ಷೆ ನಡೆಸಲಾಗುತ್ತಿದೆ. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲಾಗುವುದು. ಚಿಂತಾಜನಕ ಸ್ಥಿತಿಯಲ್ಲಿರುವವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.
ಇದೇ ವೇಳೆ ಕಲಮಸ್ಸೆರಿ ಬಾಂಬ್ ಸ್ಫೋಟದ ಹಿಂದೆ ಡೊಮಿನಿಕ್ ಮಾರ್ಟಿನ್ ಮಾತ್ರ ಕೈವಾಡವಿದೆ ಎಂದು ಪೆÇಲೀಸರು ಖಚಿತಪಡಿಸಿದ್ದಾರೆ. ಡೊಮಿನಿಕ್ ಮಾರ್ಟಿನ್ ಒಬ್ಬನೇ ಬಾಂಬ್ ತಯಾರಿಕೆ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದ ಮತ್ತು ಬೇರೆಯವರ ಸಹಾಯವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪೋಲೀಸರು ಹೇಳಿಕೆ ನೀಡಿದ್ದಾರೆ.