ಕೋಲ್ಕತ್ತಾ: ಕೋಲ್ಕತ್ತಾ ಮೂಲದ ಉದ್ಯಮಿಯೊಬ್ಬರು ಮದುವೆಯಾಗಿ 14 ವರ್ಷದ ನಂತರ ತನ್ನ ಪತ್ನಿ ವಾಸ್ತವವಾಗಿ ಬಾಂಗ್ಲಾದೇಶಿ ಪ್ರಜೆ. ಭಾರತೀಯ ಪೌರತ್ವ ಪಡೆಯಲು ತನ್ನನ್ನು ಬಳಸಿಕೊಂಡಿದ್ದಾಳೆ ಎಂದು ಆರೋಪಿಸಿ ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ.
ಕೋಲ್ಕತ್ತಾ: ಕೋಲ್ಕತ್ತಾ ಮೂಲದ ಉದ್ಯಮಿಯೊಬ್ಬರು ಮದುವೆಯಾಗಿ 14 ವರ್ಷದ ನಂತರ ತನ್ನ ಪತ್ನಿ ವಾಸ್ತವವಾಗಿ ಬಾಂಗ್ಲಾದೇಶಿ ಪ್ರಜೆ. ಭಾರತೀಯ ಪೌರತ್ವ ಪಡೆಯಲು ತನ್ನನ್ನು ಬಳಸಿಕೊಂಡಿದ್ದಾಳೆ ಎಂದು ಆರೋಪಿಸಿ ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ.
ಪಶ್ಚಿಮ ಬಂಗಾಳದ ಅಸನ್ಸೋಲ್ ನಿವಾಸಿ ತಬಿಶ್ ಎಹ್ಸಾನ್(37) ಎಂಬುವರು 2009ರಲ್ಲಿ ಕುಟುಂಬದವರು ನಿಶ್ಚಯಸಿದಂತೆ ನಾಜಿಯಾ ಅಂಬ್ರೀನ್ ಎಂಬುವರನ್ನು ವಿವಾಹವಾಗಿದ್ದರು.
ನಾಜಿಯಾ ಮನೆಯವರು ಮತ್ತೆ ಆಕೆ ಹಿಂದಿರುಗುವುದಿಲ್ಲ ಎಂದು ತಬಿಷ್ಗೆ ತಿಳಿಸಿದ್ದರು. ನಂತರ ಸೆಕ್ಷನ್ 498ಎ ಅಡಿಯಲ್ಲಿ ತಬಿಶ್ ಎಹ್ಸಾನ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೇ ಸಮಯದಲ್ಲಿ ತಬಿಶ್ಗೆ ಸಂಬಂಧಿ ಕರೊಬ್ಬರು ನಾಜಿಯಾ ವಾಸ್ತವವಾಗಿ ಬಾಂಗ್ಲಾದೇಶಿ ಪ್ರಜೆ ಎಂದು ತಿಳಿಸಿದ್ದಾರೆ. ಪತ್ನಿಯ ನಿಜವಾದ ರಾಷ್ಟ್ರೀಯತೆ ಬೆಳಕಿಗೆ ಬಂದ ನಂತರ ನಾಜಿಯಾ ಖುರೇಷಿ ಮತ್ತು ಆಕೆಯ ಕುಟುಂಬದ ಸದಸ್ಯರ ವಿರುದ್ಧ ಕೋಲ್ಕತ್ತಾದ ತಿಲಜಾಲಾ ಪೊಲೀಸ್ ಠಾಣೆಯಲ್ಲಿ ತಬಿಶ್ ಎಹ್ಸಾನ್ ದೂರು ದಾಖಲಿಸಿದ್ದಾರೆ.
ಬಾಂಗ್ಲಾದಲ್ಲೊಂದು ಮದುವೆ
ನಾಜಿಯಾ ಬಾಂಗ್ಲಾದೇಶದಲ್ಲಿ ಶಿಕ್ಷಕ ರೊಬ್ಬರನ್ನು ಮದುವೆಯಾಗಿ, ಆತನಿಂದ ವಿಚ್ಛೇದನ ಪಡೆಯಲು ಆ ವ್ಯಕ್ತಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾಳೆ ಎಂದು ತಬಿಶ್ ಹೇಳಿದ್ದಾರೆ.