ಕಾಸರಗೋಡು: ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ದಕ್ಷಿಣ ರೈಲ್ವೆ ವತಿಯಿಂದ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ವಂದೇಭಾರತ್ ಎಕ್ಸ್‍ಪ್ರೆಸ್ ರೈಲಿನಲ್ಲಿ '14 ನಿಮಿಷದ ಪವಾಡ' ಹೆಸರಿನಲ್ಲಿ ವಂದೇ ಭಾರತ್ ರೈಲು ಶುಚೀಕರಣ ಕಾರ್ಯವನ್ನು ಭಾನುವಾರ ನಡೆಸಲಾಯಿತು.
ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಹಿ ಸೇವಾ ಅಭಿಯಾನದನ್ವಯ ಮಧ್ಯಾಹ್ನ 1.50ಕ್ಕೆ ಆರಂಭಗೊಂಡ ಶುಚೀಕರಣ ಕಾರ್ಯ 2.04ಕ್ಕೆ ಕೊನೆಗೊಂಡಿದೆ. ಕೇವಲ 14 ನಿಮಿಷದಲ್ಲಿ ಕಾಸರಗೋಡು-ತಿರುವನಂತಪುರ ವಂದೇಭಾರತ್ ಎಕ್ಸ್‍ಪ್ರೆಸ್ ರೈಲಿನ 16ಕಾರ್‍ಚೇರ್‍ಗಳಲ್ಲಿ ಪ್ರತಿ ಬೋಗಿಯಲ್ಲಿ ತಲಾ ಮೂರು ಮಂದಿಯಂತೆ 48ಮಂದಿ ಕಾರ್ಮಿಕರು ಶುಚೀಕರಣ ಕಾರ್ಯಕದಲ್ಲಿ ಪಾಲ್ಗೊಂಡಿದ್ದರು.
ಮಂಗಳೂರು ಕೋಚಿಂಗ್ ಡಿಪೆÇೀ ಅಧಿಕಾರಿ ಮನೋಜ್. ಬಿ "14 ನಿಮಿಷಗಳ ಪವಾಡ" ಯೋಜನೆಗೆ ಬದ್ಧತೆಯ ಪ್ರತಿಜ್ಞೆಯನ್ನು ಬೋಧಿಸಿದರು. ಹೆಚ್ಚುವರಿ ವಿಭಾಗೀಯ ರೈಲ್ವೇ ಪ್ರಬಂಧಕ ಸಕ್ಕೀರ್ ಹುಸೇನ್ ಪಾಲಕ್ಕಾಡ್ ಅವರು "14 ನಿಮಿಷಗಳ ಪವಾಡ ಯೋಜನೆಗೆ ಚಾಲನೆ ನೀಡಿದರು. ರೈಲು ಪ್ರಯಾಣವನ್ನು ಹೆಚ್ಚು ಆನಂದದಾಯಕ, ಸಮಯಪ್ರಜ್ಞೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ '14 ನಿಮಿಷದ ಪವಾಡ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.