ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಅ.15 ರಿಂದ 24ರ ವರೆಗೆ ನವರಾತ್ರೋತ್ಸವವು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವುದು.
ಅ..15ರಂದು ಶ್ರೀ ಗಾಯತ್ರೀ ಮಾತೆಗೆ ಪಂಚಾಮೃತಾಭಿಷೇಕ, ಗಣಹೋಮ, ಸಂಜೆ 5.30ರಿಂದ ಪ್ರಶಾಂತ್ ವರ್ಮಾ ತ್ರಿಶೂರ್ ರವರ “ಭಜನ್ ಸಂಧ್ಯಾ”, ಅ..18 ರಂದು ವಿದ್ಯಾರ್ಥಿಗಳಿಗಾಗಿ ಸರಸ್ವತೀ ಯಾಗ, ಅ.19 ರಂದು ಲಲಿತಾ ಪಂಚಮಿ, ಅ.20 ರಂದು ಬೆಳಿಗ್ಗೆ ಪೂಜೆಯ ನಂತರ ಶಾರದಾ ಪ್ರತಿಷ್ಠೆ, ಅ.22 ರಂದು ಸಂಜೆ 5. ರಿಂದ ಕುಲಾಲ ಸಂಘ ಪೈವಳಿಕೆಯ ನಾಟ್ಯರಂಗ ವಿದ್ಯಾರ್ಥಿಗಳಿಂದ “ಗುರುದಕ್ಷಿಣೆ” ಯಕ್ಷಗಾನ, ಅ.23 ರಂದು ¨ಳಿಗ್ಗೆ ಆಯುಧ ಪೂಜೆ, ಶಾರದಾ ವಿಸರ್ಜನೆ, 10 ರಿಂದ ಕು.ಗಾಯತ್ರಿ ಮತ್ತು ಕು. ಶ್ರಾವಣ್ಯ ಕೊಂಡೆವೂರು ಇವರ “ಭಕ್ತಿ ಸಂಗೀತ” ಕಾರ್ಯಕ್ರಮ, ಅ.24 ರಂದು ಪ್ರಾತ:ಕಾಲದಲ್ಲಿ ವಿಶೇಷ ಸೀಯಾಳಾಭಿಷೇಕ, ತೆನೆಪೂಜೆ, ಬೆಳಗ್ಗಿನ ಪೂಜೆಯ ಬಳಿಕ ವಿದ್ಯಾರಂಭ, ಮಧ್ಯಾಹ್ನ ಮಹಾಪೂಜೆಯ ನಂತರ ಮಂತ್ರಾಕ್ಷತೆ, ಬೆಳಿಗ್ಗೆ 10. ರಿಂದ ಸವಿಜೀವನಂ ನೃತ್ಯ ಕಲಾಕ್ಷೇತ್ರ ಕೊಂಡೆವೂರು ಇವರ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವಿಯ ಅನುಗ್ರಹಭಾಜನರಾಗಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.