HEALTH TIPS

ಕೊಲ್ಲಂಗಾನ ಶ್ರೀನಿಲಯದಲ್ಲಿ ನವರಾತ್ರಿ ಉತ್ಸವ 15 ರಿಂದ

                   ಬದಿಯಡ್ಕ: ನೀರ್ಚಾಲು ಸಮೀಪದ ಕಲ್ಲಕಟ್ಟ ಕೊಲ್ಲಂಗಾನ ಶ್ರೀನಿಲಯ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವ ಅ.15 ರಿಂದ 24ರ ವರೆಗೆ ವಿವಿಧ ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಸಂಬಂಧ ಶ್ರೀಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘ ಕೊಲ್ಲಂಗಾನ ಇದರ 35ನೇ ವಾರ್ಷಿಕೋತ್ಸವ, ಯಕ್ಷದಶ ವೈಭವ ಕಾರ್ಯಕ್ರಮ ಶ್ರೀನಿಲಯದಲ್ಲಿ ನಡೆಯಲಿದೆ.

                   ಕಾರ್ಯಕ್ರಮದ ಅಂಗವಾಗಿ ಅ.15 ರಂದು ಬೆಳಿಗ್ಗೆ ಶ್ರೀದೇವರ ಪ್ರತಿಷ್ಠೆ, 19 ರಂದು ಶ್ರೀಲಲಿತಾ ಪಂಚಮಿ ಪ್ರಯುಕ್ತ ಲಲಿತೋಪಖ್ಯಾನ ಹಾಗೂ ಸಪ್ತಶತಿ ಪಾರಾಯಣ, ರಂಗಪೂಜೆ ನಡೆಯಲಿದೆ. 23 ರಂದು ಮಹಾನವಮಿಯ ಪ್ರಯುಕ್ತ ಬೆಳಿಗ್ಗೆ 12 ಕಾಯಿಗಳ ಗಣಹೋಮ, ಆಯುಧಪೂಜೆ, ಮಧ್ಯಾಹ್ನ ಚಂಡಿಕಾ ಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಫಣೆ ನಡೆಯಲಿದೆ. ರಾತ್ರಿ ಮಹಾನವಮಿ ಉತ್ಸವ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. 24 ರಂದು ಬೆಳಿಗ್ಗೆ 8 ಕ್ಕೆ ಶಾರದಾಪೂಜೆ, ವಿದ್ಯಾರಂಭ, 11 ರಿಂದ ಶ್ರೀಸೂಕ್ತ ಪಾರಾಯಣ ಹಾಗೂ ಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ವಿಜಯದಶಮಿ ಉತ್ಸವ, ರಂಗಪೂಜೆ, ಮೂಲಪೀಠದಲ್ಲಿ ದೇವರ ಸ್ಥಾಪನೆ ನಡೆಯಲಿದೆ. 

                 ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅ.15 ರಂದು ಸಂಜೆ 5.30ಕ್ಕೆ ಉದ್ಘಾಟನೆ, 6.30 ರಿಂದ 8.30ರ ವರೆಗೆ ಲಕ್ಷ್ಮೀಶ ಬೇಂಗ್ರೋಡು-ಬಳಗದವರಿಂದ ಯಕ್ಷಗಾನ ವೈಭವ ನಡೆಯಲಿದೆ. ಅ.16 ರಂದು ಸಂಜೆ 6.30 ರಿಂದ ಬೆಟ್ಟಂಪಾಡಿಯ ಶ್ರೀಮಹಾಲಿಂಗೇಶ್ವರ ಕಲಾಸಂಘದವರಿಂದ ರಾಜಸೂಯಾಧ್ವರ ತಾಳಮದ್ದಳೆ, ಅ.17 ರಂದು ಸಂಜೆ 6 ರಿಂದ ನಾರಾಯಣಮಂಗಲ ಶ್ರೀವಿಘ್ನೇಶ್ವರ ಕಲಾಸಂಘದವರಿಂದ ರಣವೀಳ್ಯ ತಾಳಮದ್ದಳೆ, ಅ.18 ರಂದು ನೀರ್ಚಾಲಿನ ಯಕ್ಷಭಾರತಿ ತಂಡದವರಿಂದ ಕರ್ಣಬೇಧನ ತಾಳಮದ್ದಳೆ, ಅ.19 ರಂದು ಸಂಜೆ 6 ರಿಂದ ಯಕ್ಷವಿಹಾರಿ ಬದಿಯಡ್ಕ ತಂಡದವರಿಂದ ಅಭಿಮನ್ಯು ಕಾಳಗ ತಾಳಮದ್ದಳೆ, ಅ.20 ರಂದು ಕುಂಟಾರು ಶ್ರೀಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘದವರಿಂದ ಶಿವಭಕ್ತ ವೀರಮಣಿ ಪ್ರಸಂಗದ ತಾಳಮದ್ದಳೆ, ಅ.21 ರಂದು ಸಂಜೆ 6 ರಿಂದ ಸುಮನ್ ರಾಜ್ ನೀಲಂಗಳ ಮತ್ತು ತಂಡದವರಿಂದ ಯಕ್ಷಗಾನ ವೈಭವ, 22 ರಂದು ಸಂಜೆ 6 ರಿಂದ ಕರಿಂಬಿಲ ಲಕ್ಷ್ಮಣ ಪ್ರಭು ಮತ್ತು ತಂಡದವರಿಂದ ಭರತಾಗಮನ ಆಖ್ಯಾನದ ತಾಳಮದ್ದಳೆ, ಅ.23 ರಂದು ಬೆಳಿಗ್ಗೆ 10 ರಿಂದ ಕಂಬಾರು ಕೇಶವ ಭಟ್ ಮತ್ತು ಬಳಗದವರಿಂದ ಪುರಾಣ ವಾಚನ-ವ್ಯಾಖ್ಯಾನ ಕಾರ್ಯಕ್ರಮ, ಸಂಜೆ 6 ರಿಂದ  ಮಾನ್ಯ ವಿಶ್ವನಾಥ ರೈ ಮತ್ತು ತಂಡದವರಿಂದ ಶರಸೇತು ಬಂಧನ ತಾಳಮದ್ದಳೆ, ಅ.24 ರಂದು ಸಂಜೆ 5.30 ರಿಂದ ಸಮಾರೋಪ, ಪಟ್ಟಾಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಂದರ್ಭ ನಾರಾಯಣ ಪುರುಷ ಸಜಂಕಿಲ, ಚನಿಯಪ್ಪ ನಾಯ್ಕ ಟೈಲರ್, ಸುಬ್ಬ ನಾಯ್ಕ ಕಟ್ಟದಮೂಲೆ ಇವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ರಾತ್ರಿ 12 ರಿಂದ ಕಂಬಾರು ಕೇಶವ ಭಟ್ ಮತ್ತು ಬಳಗದವರಿಂದ ಮೋಕ್ಷ ಸಂಗ್ರಾಮ ಯಕ್ಷಗಾನ ತಾಳಮದ್ದಳೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries