ಕುಂಬಳೆ: ಮಸ್ಕತ್ ಕೆಎಂಸಿಸಿ ಮಂಜೇಶ್ವರ ಮಂಡಲ ಸಮಿತಿ ಕುಂಬಳೆ ಪಂಚಾಯತಿ ವ್ಯಾಪ್ತಿಯ ಬಡ ಕುಟುಂಬಕ್ಕೆ ನಿರ್ಮಿಸಿ ಕೊಡಮಾಡುವ ಮೊದಲ ಮನೆಯ ಹಸ್ತಾಂತರ ಕಾರ್ಯಕ್ರಮ ಅ.15 ರಂದು ಸಂಜೆ 4ಕ್ಕೆ ಬಂಬ್ರಾಣ ಅಂಡಿತ್ತಡ್ಕದಲ್ಲಿ ನಡೆಯಲಿದೆ ಎಂದು ಪದಾಧಿಕಾರಿ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಸ್ಕತ್ ಕೆಎಂಸಿಸಿ ಮಂಜೇಶ್ವರ ಮಂಡಲಾಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಕೀಲಿಕೈ ಹಸ್ತಾಂತರಿಸುವರು. ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಮುಸ್ಲಿಂಲೀಗ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಪಿ.ಎಂ.ಮುನೀರ್ ಹಾಜಿ, ಮಂಡಲಾಧ್ಯಕ್ಷ ಅಸೀಸ್ ಮರಿಕ್ಕೆ, ಪ್ರ.ಕಾರ್ಯದರ್ಶಿ ಎ.ಕೆ.ಆರೀಫ್, ಕೋಶಾಧಿಕಾರಿ ಯು.ಕೆ.ಸೈಫುಲ್ಲ ತಂಙಳ್ ಸಹಿತ ಗಣ್ಯರು ಭಾಗವಹಿಸುವರು.
ಮಸ್ಕಟ್ ಕೆಎಂಸಿಸಿ ಮಂಡಲ ಅಧ್ಯಕ್ಷ ಅಬು ಹಾಜಿ ರೋಯಲ್, ಉಪಾಧ್ಯಕ್ಷ ಅಬೂಬಕರ್, ಕಾರ್ಯದರ್ಶಿಗಳಾದ ಖಲೀಲ್, ಕರೀಂ, ಮೊಯ್ದೀನ್ ಸುದ್ದಿಗೋಷ್ಠಿಯಲ್ಲಿದ್ದರು.