ಕಾಸರಗೋಡು: ದಸರಾ ಸಾಂಸ್ಕøತಿಕೋತ್ಸವ-2023 ಕಾರ್ಯಕ್ರಮ ಅ. 15ರಿಂದ 24ರ ವರೆಗೆ ಕಾಸರಗೋಡು ಪಆಂಗೋಡು ಶ್ರೀ ದಉರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನದ ವೇದಿಕೆಯಲ್ಲಿ ಜರುಗಲಿರುವುದು.
ದೇವಸ್ಥಾನದ ಮುಖ್ಯ ಪಾತ್ರಿ ಪ್ರವೀಣ್ ನಾಯಕ್ ಸಮಾರಂಭ ಉದ್ಘಾಟಿಸುವರು. ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ಅಧ್ಯಕ್ಷ ವಾಮನರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು. ಕೋಟೆ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ. ಅನಂತ ಕಾಮತ್ ಗೌರವ ಉಪಸ್ಥಿತಿ ವಹಿಸುವರು. ಈ ಸಂದರ್ಭ ದಸರಾ ಸಂಕೀರ್ತನಾ ದಶಾಹ ಕಾರ್ಯಕ್ರಮಕ್ಕೆ ಖ್ಯಾತ ಸಂಕೀರ್ತನಾಕಾರ ಜಯಾನಂದ ಕುಮಾರ್ ಹೊಸದುರ್ಗ ಚಾಲನೆ ನೀಡುವರು. ಪ್ರತಿ ದಿನ ಭಜನೆ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.
22ರಂದು ನಡೆಯುವ ದಸರಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಉದ್ಘಾಟಿಸುವರು. ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಕನ್ನಡ ಭವನ ಮತ್ತು ಗ್ರಂಥಾಲಯ ವತಿಯಿಮದ ಕಾಸರಗೋಡು ದಸರಾ ಸನ್ಮಾನ, ಕೇರಳ-ಕರ್ನಾಟಕದ 30ಮಂದಿ ಬಹುಮುಖ ಯುವ ಪ್ರತಿಭೆಗಳಿಗೆ 'ಭರವಸೆಯ ಬೆಳಕು-2023'ಯುವ ಪ್ರತಿಭಾ ಪುರಸ್ಕಾರ ನೀಡಲಾಗುವುದು. ರಾತ್ರಿ 8ರಿಂದ ಹರಿಕತೆ, ಭಕ್ತಿ ರಸಮಂಜರಿ, ನೃತ್ಯ ವೈವಿಧ್ಯ ನಡೆಯುವುದ.
23ರಂದು ರಾತ್ರಿ 8ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯುವುದು.