ಕಾಸರಗೋಡು: 1957ರಲ್ಲಿ ಪ್ರಾರಂಭವಾದ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗವು ಇದೀಗ ಅರುವತ್ತಾರು ವರ್ಷವನ್ನು ಪೂರ್ತಿಗೊಳಿಸಿದೆ. ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಹಸ್ರಾರು ಮಂದಿ ಈ ವಿಭಾಗದ ಹಳೆ ವಿದ್ಯಾರ್ಥಿಗಳು. ನಾಡಿನ ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕøತಿಕ ಪ್ರಗತಿಗೆ ಈ ವಿಭಾಗದ ಕೊಡುಗೆ ಗಣನೀಯವಾದುದು.
ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಪರಿಶೀಲಿಸಿ, ಗ್ರೇಡ್ ನೀಡುತ್ತಿರುವ, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆ (ಓಚಿಣioಟಿಚಿಟ ಂssessmeಟಿಣ ಚಿಟಿಜ ಂಛಿಛಿಡಿeಜiಣಚಿಣioಟಿ ಅouಟಿಛಿiಟ) ಯು, ಕಾಸರಗೋಡು ಸರಕಾರಿ ಕಾಲೇಜಿಗೆ ನೀಡಿದ ಶ್ರೇಯಾಂಕದಲ್ಲಿ ಕನ್ನಡ ವಿಭಾಗದ ಕೊಡುಗೆಯನ್ನು ಕಳೆದ ಎರಡು ಬಾರಿಯೂ ವಿಶೇಷವಾಗಿ ಪರಿಗಣಿಸಿದೆ.
ಡಿಸೆಂಬರ್ ತಿಂಗಳಿನೊಳಗೆ ನಾೈಕ್ ತಂಡವು ಕಾಲೇಜನ್ನು ಸಂದರ್ಶಿಸಿ ಮೌಲ್ಯಮಾಪನ ಮಾಡಲಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನ ಪ್ರತಿ ವಿಭಾಗವು ಹಳೆ ವಿದ್ಯಾರ್ಥಿಗಳ ಸಮ್ಮಿಲನವನ್ನು ಆಯೋಜಿಸಿದೆ.
ಕನ್ನಡ ವಿಭಾಗದ ಹಳೆ ವಿದ್ಯಾರ್ಥಿಗಳ ಈ ವರ್ಷದ ಮಹಾ ಸಭೆ ಅಕ್ಟೋಬರ್ 15 ಭಾನುವಾರ ಬೆಳಗ್ಗೆ 10: ಕ್ಕೆ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆಯಲಿದೆ. ಕನ್ನಡ ವಿಭಾಗದಲ್ಲಿ ಬಿ.ಎ, ಎಂ.ಎ ಅಥವಾ ಪಿಎಚ್ಡಿ ಮಾಡಿದ ವಿದ್ಯಾರ್ಥಿಗಳು ಈ ಮಹಾ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.