ಕುಂಬಳೆ: ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪೂರ್ಣಗೊಂಡ ಬಹುಮಹಡಿ ಕಟ್ಟಡವನ್ನು ಸಾರ್ವಜನಿಕ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಅ.16ರಂದು ಮಧ್ಯಾಹ್ನ 2.30ಕ್ಕೆ ಉದ್ಘಾಟಿಸಲಿದ್ದಾರೆ ಎಂದು ಸಂಬಂಧಪಟ್ಟವರು ಶುಕ್ರವಾರ ಕುಂಬಳೆಯಲಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎ.ಕೆ.ಎಂ.ಅಶ್ರಫ್ ವಹಿಸಲಿದ್ದಾರೆ. ಸಂಸದ ರಾಜ ಮೋಹನ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 12,05.50 ಚದರ ಮೀಟರ್ ವಿಸ್ತೀರ್ಣದ ಕಟ್ಟಡವನ್ನು ಮೂರು ಮಹಡಿಗಳಲ್ಲಿ ತಲಾ ಐದು ತರಗತಿ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಶೌಚಾಲಯದ ಕೊಠಡಿಗಳನ್ನೂ ನಿರ್ಮಿಸಲಾಗಿದೆ.
ಕಚೇರಿ ಕೊಠಡಿ, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಅಡುಗೆ ಕೋಣೆ, ಕೌನ್ಸಿಲಿಂಗ್ ಕೊಠಡಿ, ಐಇಡಿ ಕೊಠಡಿ ಮತ್ತು ವೇದಿಕೆಯನ್ನು ಒಳಗೊಂಡಿದೆ. ಪ್ರೌಢಶಾಲೆಯಲ್ಲಿ 1679 ವಿದ್ಯಾರ್ಥಿಗಳು ಮತ್ತು ಹೈಯರ್ ಸೆಕೆಂಡರಿಯಲ್ಲಿ 605 ವಿದ್ಯಾರ್ಥಿಗಳು ಸೇರಿದಂತೆ 2283 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶೈಕ್ಷಣಿಕ ಉತ್ಕøಷ್ಟತೆ ಮತ್ತು ಕಲೆಯಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯು ಕಾಸರಗೋಡು ಶೈಕ್ಷಣಿಕ ಜಿಲ್ಲೆಯ ಪ್ರಮುಖ ಸರ್ಕಾರಿ ಶಾಲೆಯಾಗಿ ಗುರುತಿಸಿಕೊಂಡಿದೆ. ಕೇರಳ ಸರ್ಕಾರದ ಸಾರ್ವಜನಿಕ ಶಿಕ್ಷಣ ಅಭಿಯಾನದ ಅಂಗವಾಗಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಯನ್ನು ಸುಧಾರಿಸಲು, ಶಾಲಾ ಕಟ್ಟಡದ ಶಿಲಾನ್ಯಾಸವನ್ನು 3 ಕೋಟಿ ಕಿಪ್ಬಿ ನಿಧಿಯ ಮೂಲಕ ವಿನಿಯೋಗಿಸಲಾಯಿತು. 2020ರ ನವೆಂಬರ್ 4 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. 2020-21ನೇ ಆರ್ಥಿಕ ವಷರ್Àದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿ ಮಂಜೂರು ಮಾಡಿ ಪೂರ್ಣಗೊಳಿಸಿದ ವಿಶ್ರಾಂತಿ ಕೇಂದ್ರವನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಲಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಮಾಜಿಕ, ಸಾಂಸ್ಕೃತಿಕ ಮುಖಂಡರು ಭಾಗಿಯಾಗಲಿದ್ದಾರೆ.
ಉದ್ಘಾಟನೆಗೂ ಮುನ್ನ ಪಂಚಾಯಿತಿ ಆವರಣದಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಮೆರವಣಿಗೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಪಿ.ಟಿ.ಎ. ಅಧ್ಯಕ್ಷ ಎ.ಕೆ.ಆರೀಫ್, ಮುಖ್ಯಶಿಕ್ಷಕಿ ಪಿ.ಆರ್.ಶೈಲಜಾ ಟೀಚರ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಕೆ.ಮುಹಮ್ಮದ್ ಅಲಿ ಮಾವಿನಕಟ್ಟೆ, ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎ.ರಹ್ಮಾನ್ ಆರಿಕ್ಕಾಡಿ, ಸಂಚಾಲಕ ಕೆ.ಎಂ.ಮೊಯ್ದೀನ್ ಅಜೀಜ್, ಎಸ್.ಎಂ.ಸಿ.ಅಧ್ಯಕ್ಷ ಕೆ.ವಿ.ಯೂಸುಫ್, ಮುಹಮ್ಮದ್ ಅರಬಿ ಉಳುವಾರ್, ಅನ್ಸಾರ್ ಅಂಗಡಿಮೊಗರು, ಮಧುಸೂದನನ್ ಮಾಸ್ತರ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.