ಕಾಸರಗೋಡು: ಕೇರಳ ಲೋಕಾಯುಕ್ತ ಸಿಟ್ಟಿಂಗ್ ಅ. 17ರಿಂದ 20ರ ವರೆಗೆ ಕಣ್ಣೂರು, ಕೋಝಿಕ್ಕೋಡ್‍ನ ಕ್ಯಾಂಪ್ ಸಿಟ್ಟಿಂಗ್ ನಡೆಯಲಿದೆ. 17 ರಂದು ಕಣ್ಣೂರು ಸರ್ಕಾರಿ ಅತಿಥಿಗೃಹದ ಕಾನ್ಫರೆನ್ಸ್ ಹಾಲ್‍ನಲ್ಲಿ ಉಪ ಆಯುಕ್ತ ಜಸ್ಟೀಸ್ ಹರೂನ್ ಅಲ್ ರಶೀದ್ (ಸಿಂಗಲ್ ಬೆಂಚ್) ನೇತೃತ್ವದಲ್ಲಿ ಜರುಗಲಿದೆ.
18 ರಂದು ಕಣ್ಣೂರು ಸರ್ಕಾರಿ ಅತಿಥಿಗೃಹದ ಕಾನ್ಫರೆನ್ಸ್ ಹಾಲ್‍ನಲ್ಲಿ ಲೋಕಾಯುಕ್ತ ಜಸ್ಟೀಸ್ ಸಿರಿಯಾಕ್ ಜೋಸೆಫ್, ಉಪಲೋಕಾಯುಕ್ತ ಜಸ್ಟೀಸ್ ಹರೂನ್ ಅಲ್ ರಶೀದ್ (ಡಿವಿಷನ್ ಬೆಂಚ್), 19 ರಂದು ಕೋಯಿಕ್ಕೋಡ್ ಕಣ್ಣೂರು ಸರ್ಕಾರಿ ಅತಿಥಿಗೃಹದ ಕಾನ್ಫರೆನ್ಸ್ ಹಾಲ್‍ನಲ್ಲಿ ಲೋಕಾಯುಕ್ತ ಜಸ್ಟೀಸ್ ಸಿರಿಯಕ್ ಜೋಸೆಫ್ ಹಾಗೂ ಉಪಲೋಕಾಯುಕ್ತ ಜಸ್ಟೀಸ್ ಹರೂನ್ ಅಲ್ ರಶೀದ್ (ಡಿವಿಷನ್ ಬೆಂಚ್), 20 ರಂದು ಕೋಝಿಕ್ಕೋಡ್ ಕಣ್ಣೂರು ಸರ್ಕಾರಿ ಅತಿಥಿಗೃಹದ ಕಾನ್ಫರೆನ್ಸ್ ಹಾಲ್‍ನಲ್ಲಿ ಉಪಲೋಕಾಯುಕ್ತ ಜಸ್ಟೀಸ್ ಹರೂನ್ ಅಲ್ ರಶೀದ್ (ಸಿಂಗಿಲ್ ಬೆಂಚ್) ಸಿಟ್ಟಿಂಗ್ ನಡೆಸಲಿದ್ದಾರೆ. ಈ ದಿನಗಳಲ್ಲಿ ಹೊಸ ದೂರುಗಳನ್ನು ಸ್ವೀಕರಿಸಲಾಗುತ್ತದೆ ಎಂದು ಪರಕಟಣೆ ತಿಳಿಸಿದೆ.