ಕಾಸರಗೋಡು: ಕಾರಿನಲ್ಲಿ ಅನದಿಕೃತವಗಿ ಸಾಗಿಸುತ್ತಿದ್ದ 1.75ಕೋಟಿ ರೂ. ನಗದನ್ನು ತಲಶ್ಯೇರಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಮಹಾರಾಷ್ಟ್ರ ಸಾಂಗ್ಲಿ ನಿವಾಸಿ ಸ್ವಪ್ಲಿನ್ ಲಕ್ಷ್ಮಣ್(27)ಎಂಬಾತನನ್ನು ಬಂಧಿಸಿದ್ದರೆ. ಇನ್ನೊಬ್ಬ ಆರೋಪಿ ಓಡಿ ಪರಾರಿಯಾಗಿದ್ದನೆ. ಹಣ ಸಾಗಟಕ್ಕೆ ಬಳಸಿದ್ದ ಕಾರು ಕಾಸರಗೊಡು ಜಿಲ್ಲೆಯ ಕ್ಲಾಯಿಕ್ಕೊಡ್ ನಿವಾಸಿಯದ್ದಾಗಿದ್ದು, ಈ ನಿಟ್ಟಿನಲ್ಲಿ ತನಿಖೆಯನ್ನು ಕಾಸರಗೋಡಿಗೆ ವಿಸ್ತರಿಸಿದ್ದಾರೆ.
ಕಾರಿನೊಳಗೆ ಪ್ರತ್ಯೇಕ ಪದರ ನಿರ್ಮಿಸಿ, ಇದರಲ್ಲಿ 2ಸಾವಿರ ಹಾಗೂ 500ರೂ. ಮುಖಬೆಲೆಯ ನೋಟುಗಳನ್ನು ಕಂತೆಯನ್ನಾಗಿಸಿ ಸಾಗಿಸಲಾಗುತ್ತಿತ್ತು. ತಲಶ್ಯೇರಿ ಸಹಕಾರಿ ಆಸ್ಪತ್ರೆ ಸನಿಹ ಪೊಲೀಸರು ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವೇಳೆ ಆಗಮಿಸಿದ ಕಾರನ್ನು ತಪಾಸಣೆ ನಡೆಸಿದಾಗ ಮೇಲ್ನೋಟಕ್ಕೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಕಾರಿನಲ್ಲಿದ್ದವರ ಚಲನವಲನದ ಬಗ್ಗೆ ಸಂಶಯಗೊಂಡು ಕಾರನ್ನು ಸನಿಹದ ವರ್ಕ್‍ಶಾಪ್‍ಗೆ ಕೊಂಡೊಯ್ದು ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಪ್ರತ್ಯೇಕ ಪದರ ನಿರ್ಮಿಸಿ ಹಣ ದಾಸ್ತಾನಿರಿಸಿರುವುದು ಪತ್ತೆಯಾಗಿತ್ತು. ತಲಶ್ಯೇರಿ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಎಂ. ಅನಿಲ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಬಗ್ಗೆ ಆದಾಯತೆರಿಗೆ ಮತ್ತು ಎನ್‍ಫೋರ್ಸ್‍ಮೆಂಟ್ ಡೈರೆಕ್ಟರೇಟ್‍ಗೂ ಮಾಹಿತಿ ನೀಡಿದ್ದಾರೆ.