HEALTH TIPS

ಭಾರತ ವಿರೋಧಿ 17 ಉಗ್ರರು ಅಪರಿಚಿತರ ಗುಂಡಿಗೆ ಬಲಿ

              ವದೆಹಲಿಜೈಶ್-ಎ-ಮೊಹಮ್ಮದ್ ಮುಖ್ಯಸ್ಥ (ಜೆಇಎಂ) ಮಸೂದ್ ಅಜರ್​ನ ಸಹಾಯಕನೊಬ್ಬನನ್ನು ಶುಕ್ರವಾರ ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ಈ ಮೂಲಕ ಕಳೆದ 19 ತಿಂಗಳಲ್ಲಿ ಭಾರತ ವಿರೋಧಿ 17ನೇ ಭಯೋತ್ಪಾದಕನು ಅಪರಿಚಿತರು ನಡೆಸಿದ ದಾಳಿಯಲ್ಲಿ ಅಸುನೀಗಿದಂತಾಗಿದೆ.

             ಐಸಿ 814 ವಿಮಾನದ ಅಪಹರಣಕಾರ ಹಾಗೂ ಜೆಇಎಂ ಸದಸ್ಯ ಮಿಸ್ತ್ರಿ ಜಹೂರ್ ಇಬ್ರಾಹಿಂ ಜಾಹಿದ್ ಅಖೂಂದನು 2022ರ ಮಾರ್ಚ್ 1ರಂದು ಕರಾಚಿಯಲ್ಲಿ ಅಪರಿಚಿತ ಬಂದೂಕುಧಾರಿಗಳಿಗೆ ಬಲಿಯಾಗುವ ಮೂಲಕ ವಿದೇಶಗಳಲ್ಲಿ ಭಾರತ ವಿರೋಧಿ ಭಯೋತ್ಪಾದಕರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆಗೈಯುವ ಸರಪಳಿಯು ಪ್ರಾರಂಭವಾಗಿತ್ತು.

               ಈಗ ಭಾರತ-ವಿರೋಧಿ ಭಯೋತ್ಪಾದಕ ಗುಂಪಿಗೆ ಮತ್ತೊಂದು ಬಹುದೊಡ್ಡ ಹೊಡೆತ ಬಿದ್ದಿದೆ. ಶುಕ್ರವಾರ ಮುಂಜಾನೆ ಪಾಕಿಸ್ತಾನದ ಉತ್ತರ ವಜೀರಿಸ್ತಾನ್​ನಲ್ಲಿ ಅಪರಿಚಿತ ಬಂದೂಕುಧಾರಿಗಳು ದಾಳಿ ಮಾಡಿ, ಜೆಇಎಂ ಮುಖ್ಯಸ್ಥ ಮಸೂದ್ ಅಜರ್​ನ ವಿಶ್ವಾಸಾರ್ಹ ಆಪ್ತ ಹಾಗೂ ಬುಡಕಟ್ಟು ನಾಯಕ ದಾವುದ್ ಮಲಿಕ್​ನನ್ನು ಹಗಲಿನಲ್ಲಿಯೇ ಹತ್ಯೆ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್ 30ರಂದು ಕರಾಚಿಯಲ್ಲಿ ಕುಖ್ಯಾತ ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಭಯೋತ್ಪಾದಕ ಗುಂಪಿಗೆ ಸೇರಿದ ಪ್ರಮುಖ ಸದಸ್ಯ ಮುಫ್ತಿ ಕೈಸರ್ ಫಾರೂಕ್​ನನ್ನು ಹತ್ಯೆಗೈಯಲಾಗಿತ್ತು. ಈತ 26/11 ದಾಳಿಯ (ಮುಂಬೈ ಮೇಲಿನ ದಾಳಿ) ಹಿಂದಿನ ಮಾಸ್ಟರ್​ವೆುೖಂಡ್ ಹಫೀಜ್ ಸಯೀದ್​ಗೆ ಆಪ್ತನಾಗಿದ್ದ. ಪಾಕಿಸ್ತಾನಿ ಭದ್ರತಾ ಏಜೆನ್ಸಿಗಳ ವಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳು, ಮುಫ್ತಿ ಫಾರೂಕ್ ತನ್ನ ಮದರಸಾ ವಿದ್ಯಾರ್ಥಿಗಳ ಗುಂಪಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹೊಂಚುದಾಳಿಗೆ ಬಲಿಯಾದ ಕ್ಷಣವನ್ನು ಸೆರೆಹಿಡಿರುವುದನ್ನು ತೋರಿಸುತ್ತವೆ. ಮೋಟಾರ್​ಸೈಕಲ್​ನಲ್ಲಿ ಬಂದ ಇಬ್ಬರು ಅಪರಿಚಿತರು ವೇಗವಾಗಿ ಗುಂಡುಗಳ ಸುರಿಮಳೆಗೈದಿದ್ದರಿಂದ ಈತ ಸ್ಥಳದಲ್ಲೇ ಅಸುನೀಗಿದ್ದ.

                    ಇದಾದ ನಂತರ ಈಗ ಉತ್ತರ ವಜಿರಿಸ್ತಾನ್ ಬುಡಕಟ್ಟು ಜಿಲ್ಲೆಯ ಮಿರಾಲಿ ಪ್ರದೇಶದಲ್ಲಿ ಮುಸುಕುಧಾರಿ ಬಂದೂಕು ಧಾರಿಗಳು ಖಾಸಗಿ ಕ್ಲಿನಿಕ್​ನಲ್ಲಿ ಹೊಂಚುಹಾಕಿ ದಾವುದ್ ಮಲಿಕ್ ಮೇಲೆ ದಾಳಿ ನಡೆಸಿ ಕೊಲೆಗೈದಿದ್ದಾರೆ. ಪಾಕಿಸ್ತಾನ ಮತ್ತು ಕೆನಡಾ ಪ್ರದೇಶದಲ್ಲಿ ಕಳೆದ 19 ತಿಂಗಳುಗಳಲ್ಲಿ ಅಪರಿಚಿತ ದಾಳಿಕೋರರಿಗೆ ಬಲಿಯಾದ 17ನೇ ಭಾರತ ವಿರೋಧಿ ಭಯೋತ್ಪಾದಕ ಈತನಾಗಿದ್ದಾನೆ. ಇತ್ತೀಚೆಗೆ ಸೆಪ್ಟೆಂಬರ್ 12ರಂದು ಕರಾಚಿಯಲ್ಲಿ ಮತ್ತೊಬ್ಬ ಉನ್ನತ ಲಷ್ಕರ್ ಕಾರ್ಯಕರ್ತ ಮೌಲಾನಾ ಜಿಯಾವುರ್ ರೆಹಮಾನ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು.

           ಇದಾದ ತರುವಾಯ, ಖಲಿಸ್ತಾನಿ ಭಯೋತ್ಪಾದಕ ರಿಪುದಮನ್ ಸಿಂಗ್ ಮಲಿಕ್ 2022ರ ಜುಲೈ 15ರಂದು ಕೆನಡಾದ ಸರ್ರೆಯಲ್ಲಿ ಕೊಲೆಗೀಡಾಗಿದ್ದ. ಈತ 1985ರ ಏಪ್ರಿಲ್ 23ರಂದು ಏರ್ ಇಂಡಿಯಾ ವಿಮಾನದ ಕನಿಷ್ಕದ ಮೇಲೆ ಬಾಂಬ್ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ವಿಮಾನ ಬಾಂಬ್ ದಾಳಿಯಲ್ಲಿ 329 ಅಮಾಯಕರು ಸಾವನ್ನಪ್ಪಿದರು.

ಆತಂಕದಲ್ಲಿ ಐಎಸ್​ಐ

                ಪಾಕಿಸ್ತಾನದ ನೆಲದಲ್ಲಿಯೇ ಭಾರತ ವಿರೋಧಿ ಉಗ್ರರ ಹತ್ಯೆಗಳು ನಿರಂತರವಾಗಿ ಸಾಗಿರುವುದು ಪಾಕಿಸ್ತಾನದ ಕಾನೂನು ಜಾರಿ ಸಂಸ್ಥೆಗಳು ಮತ್ತು ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ (ಐಎಸ್​ಐ) ಆತಂಕಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಐಎಸ್​ಐ ತಾನು ಸಾಕಿರುವ ಹಲವು ಉಗ್ರರನ್ನು ಸುರಕ್ಷಿತ ಅಡಗುತಾಣಗಳಿಗೆ ತ್ವರಿತವಾಗಿ ಸ್ಥಳಾಂತರಿಸಿದೆ ಎನ್ನಲಾಗಿದೆ. ರಾವಲ್​ಕೋಟ್​ನಲ್ಲಿ ಐಎಸ್​ಐ ಪ್ರಧಾನ ಕಚೇರಿ ಸಮೀಪವೇ ಈ ವರ್ಷದ ಆರಂಭದಲ್ಲಿ ಅಬು ಖಾಸಿಮ್ ಕಾಶ್ಮೀರಿ ಮತ್ತು ನಾಜಿಮಾಬಾದ್​ನಲ್ಲಿ ಖಾರಿ ಖುರಾ›ಮ್ ಶೆಹಜಾದ್ ಎಂಬ ಇಬ್ಬರು ಲಷ್ಕರ್ ಉಗ್ರರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಐಎಸ್​ಐ ಇಂತಹ ಕ್ರಮ ಕೈಗೊಂಡಿದೆ ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries