ನವದೆಹಲಿ: ದೇಶದ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಕ್ಕಾಗಿ 13 ನ್ಯಾಯಾಂಗ ಅಧಿಕಾರಿಗಳು ಹಾಗೂ ಐವರು ಅಡ್ವೊಕೇಟ್‌ಗಳ ಹೆಸರುಗಳನ್ನು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.
ನವದೆಹಲಿ: ದೇಶದ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಕ್ಕಾಗಿ 13 ನ್ಯಾಯಾಂಗ ಅಧಿಕಾರಿಗಳು ಹಾಗೂ ಐವರು ಅಡ್ವೊಕೇಟ್‌ಗಳ ಹೆಸರುಗಳನ್ನು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.
ನ್ಯಾಯಾಂಗ ಅಧಿಕಾರಿಗಳಾದ ಶಾಲಿಂದರ್ ಕೌರ್ ಹಾಗೂ ರವೀಂದ್ರ ಡುಡೇಜಾ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿರುವ ಕೊಲಿಜಿಯಂ, ಈ ಇಬ್ಬರು ಅಧಿಕಾರಿಗಳಿಗಿಂತ ಹಿರಿಯ ಅಧಿಕಾರಿಯೊಬ್ಬರ ಪದೋನ್ನತಿಗೆ ಒಪ್ಪಿಗೆ ನೀಡಿಲ್ಲ.
ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ನ್ಯಾಯಾಂಗ ಅಧಿಕಾರಿಗಳಾದ ಎಂ.ಬಿ.ಸ್ನೇಹಲತಾ, ಜಾನ್ಸನ್ ಜಾನ್, ಜಿ.ಗಿರೀಶ್, ಸಿ.ಪ್ರದೀಪ್ ಕುಮಾರ್ ಹಾಗೂ ಪಿ.ಕೃಷ್ಣಕುಮಾರ್ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.
ನ್ಯಾಯಾಂಗ ಅಧಿಕಾರಿಗಳಾದ ಅಭಯ್ ಜೈನಾರಾಯಣಜಿ ಮಂತ್ರಿ, ಶ್ಯಾಮ್ ಛಗನ್‌ಲಾಲ್ ಚಾಂಡಕ್ ಹಾಗೂ ನೀರಜ್ ಪ್ರದೀಪ್ ಧೋತೆ ಅವರನ್ನು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವುದಕ್ಕೆ ಶಿಫಾರಸು ಮಾಡಲಾಗಿದೆ. ವಿಮಲ್ ಕನ್ಹಯ್ಯಲಾಲ್ ವ್ಯಾಸ್ (ಗುಜರಾತ್ ಹೈಕೋರ್ಟ್), ಬಿಸ್ವಜಿತ್ ಪಲಿಟ್, ಸವ್ಯಸಾಚಿ ದತ್ತ ಪುರಕಾಯಸ್ಥ (ತ್ರಿಪುರಾ ಹೈಕೋರ್ಟ್) ಅವರ ಹೆಸರುಗಳನ್ನು ಕೊಲಿಜಿಯಂ ಶಿಫಾರಸು ಮಾಡಿದೆ.
ಕೇಂದ್ರ ಸರ್ಕಾರದ ಆಕ್ಷೇಪದ ಹೊರತಾಗಿಯೂ ಅಡ್ವೊಕೇಟ್ ರವೀಂದ್ರಕುಮಾರ್ ಅಗ್ರವಾಲ್ ಅವರನ್ನು ಛತ್ತೀಸಗಢ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಕ್ಕೆ ಶಿಫಾರಸು ಮಾಡಲಾಗಿದೆ.
ಅಡ್ವೊಕೇಟ್‌ಗಳಾದ ಹರಿನಾಥ್ ನೂನೆಪಲ್ಲಿ, ಕಿರಣ್ಮಯಿ ಮಾಂಡವ, ಸುಮತಿ ಜಗದಂ ಹಾಗೂ ನ್ಯಾಪತಿ ವಿಜಯ್ ಅವರನ್ನು ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ.