ನವದೆಹಲಿ: ಕೆಲ ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ಮಳೆ ಬರಿಸುವ ವಿಧಾನವಾದ ಮೋಡ ಬಿತ್ತನೆಯಿಂದಾಗಿ ಮಹಾರಾಷ್ಟ್ರದ ಸೊಲ್ಲಾಪುರ ಭಾಗದಲ್ಲಿ ವಾಡಿಕೆಗಿಂತ ಶೇ 18ರಷ್ಟು ಹೆಚ್ಚು ಮಳೆ ಬಿದ್ದಿದೆ ಎಂದು ಅಧ್ಯಯನವೊಂದು ಹೇಳಿದೆ.
ನವದೆಹಲಿ: ಕೆಲ ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ಮಳೆ ಬರಿಸುವ ವಿಧಾನವಾದ ಮೋಡ ಬಿತ್ತನೆಯಿಂದಾಗಿ ಮಹಾರಾಷ್ಟ್ರದ ಸೊಲ್ಲಾಪುರ ಭಾಗದಲ್ಲಿ ವಾಡಿಕೆಗಿಂತ ಶೇ 18ರಷ್ಟು ಹೆಚ್ಚು ಮಳೆ ಬಿದ್ದಿದೆ ಎಂದು ಅಧ್ಯಯನವೊಂದು ಹೇಳಿದೆ.
ಪುಣೆ ಮೂಲದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟಿಯಾರಾಲಜಿ (ಐಐಟಿಎಂ) ಹಾಗೂ ಇತರ ಸಂಸ್ಥೆಗಳು ಈ ಕುರಿತು ಅಧ್ಯಯನ ಕೈಗೊಂಡಿದ್ದವು.
'ಸೊಲ್ಲಾಪುರ ಬಳಿಯ 100 ಚದರ ಕಿ.ಮೀ. ಪ್ರದೇಶದಲ್ಲಿ ಮೋಡ ಬಿತ್ತನೆ ಕೈಗೊಳ್ಳಲಾಗಿತ್ತು. ಮೋಡಗಳಲ್ಲಿನ ತೇವಾಂಶವನ್ನು ಹೀರಿಕೊಂಡು, ಮಳೆಯಾಗುವಂತೆ ಮಾಡುವಲ್ಲಿ ಈ ರಾಸಾಯನಿಕ ಕ್ರಿಯೆ ಯಶಸ್ಸು ನೀಡಿತ್ತು' ಎಂದು ಐಐಟಿಎಂ ಅಧ್ಯಯನವು ಹೇಳಿದೆ.
'ಮೋಡ ಬಿತ್ತನೆ ಕೈಗೊಂಡಿದ್ದ ಪ್ರದೇಶದಲ್ಲಿ ಮಳೆ ಬೀಳುವ ಪ್ರಮಾಣದಲ್ಲಿ ಶೇ 18ರಷ್ಟು ಹೆಚ್ಚಳ ಕಂಡುಬಂದಿದೆ. ರಾಡಾರ್ ನೆರವಿನಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಇದನ್ನು ದೃಢಪಡಿಸಿವೆ' ಎಂದು ಯೋಜನಾ ನಿರ್ದೇಶಕಿ ತಾರಾ ಪ್ರಭಾಕರನ್ ಹೇಳಿದ್ದಾರೆ.
2017-19ರ ಅವಧಿಯಲ್ಲಿ ಮೋಡ ಬಿತ್ತನೆ ಪ್ರಯೋಗವನ್ನು ಕೈಗೊಳ್ಳಲಾಗಿತ್ತು. ಈ ವಿಧಾನವು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದನ್ನು ಅಧ್ಯಯನ ಮಾಡಲು 276 ಮೋಡಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗಿತ್ತು. ಭೂವಿಜ್ಞಾನಗಳ ಸಚಿವಾಲಯವು ಈ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು.