ನವದೆಹಲಿ: ಶಾಸನ ಸಭೆಗಳಲ್ಲಿ ಮಾತನಾಡಲು ಅಥವಾ ಮತ ಚಲಾಯಿಸಲು ಲಂಚ ಪಡೆದುಕೊಂಡಿದ್ದಾಗಲೂ ಸಂಸದರು ಹಾಗೂ ಶಾಸಕರಿಗೆ ಕಾನೂನಿನ ಕ್ರಮದಿಂದ ರಕ್ಷಣೆ ಇರುತ್ತದೆ ಎಂದು 1998ರಲ್ಲಿ ನೀಡಿದ್ದ ತೀರ್ಪಿನ ಪುನರ್ ಪರಿಶೀಲನೆ ನಡೆಸಬೇಕೇ ಎಂಬುದಕ್ಕೆ ಸಂಬಂಧಿಸಿದ ಆದೇಶವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಕಾಯ್ದಿರಿಸಿದೆ.