ಕುಂಬಳೆ: ಕುಂಬಳೆ ಸೀಮೆಯ ಪ್ರತೀ ಕುಟುಂಬದ ಸದಸ್ಯರಿಗೆ ಆರೋಗ್ಯ ವೃದ್ಧಿ ಕುಟುಂಬದ ಸಂಪತ್ತು ವೃದ್ಧಿ, ಮಕ್ಕಳ ವಿದ್ಯಾ ಬುದ್ಧಿ ಸಂಸ್ಕಾರ ವೃದ್ಧಿ, ಹಾಗೂ ಸೀಮೆಯ ಎಲ್ಲರೂ ಪರಸ್ಪರ ಸೌಹಾದರ್ದಿಂದ ಬದುಕಿ ಮಾದರಿ ಸೀಮೆಯನ್ನಾಗಿ ಮಾಡುವ ಉದ್ದೇಶದೊಂದಿಗೆ ಸೀಮೆಯ ಅಡೂರು, ಮಧೂರು, ಮುಜುಂಗಾವು, ಕಣಿಪುರ ಕ್ಷೇತ್ರಗಳ ದೇವರ ಅನುಗ್ರಹ, ನಾಲ್ಕು ದೈವಸ್ಥಾನಗಳ ದೈವಗಳ ಸರ್ವಾನುಗ್ರಹ ಪ್ರಾಪ್ತವಾಗಲಿ ರಾಮನಾಮ ಜಪ ಧನ್ವಂತರಿ ಪೂಜೆ, ಪುರುಷೋತ್ತಮ ಯಾಗದಿಂದ ಸೀಮೆಯ ಎಲ್ಲರೂ ಪ್ರಭು ಶ್ರೀರಾಮಚಂದ್ರನಂತೆ ಪುರುಷೋತ್ತಮ ಗುಣವನ್ನು ಸಂಪಾದಿಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಕುಂಬಳೆ ಸೀಮೆಯ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರ ಅನುಮತಿಯೊಂದಿಗೆ ದೇವಸ್ಥಾನದ ಅರ್ಚಕರು ಶ್ರೀದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
ನ.19ರಂದು ಪಳ್ಳತ್ತಡ್ಕದಲ್ಲಿ ನಡೆಯಲಿರುವ ಪುರುಷೋತ್ತಮ ಯಾಗ ಸಮಿತಿಯ ಪದಾಧಿಕಾರಿಗಳು ಈ ಸಂದಭರ್Àದಲ್ಲಿ ಉಪಸ್ಥಿತರಿದ್ದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು, ಕಾರ್ಯದರ್ಶಿ ರಾಜನ್ ಮುಳಿಯಾರು, ಸುರೇಶ್ ಬಾಬು ಕಾನತ್ತೂರು, ದಾಮೋದರ ಮಣಿಯಾರು, ಮುರಳಿ ಪಾಂಡಿ ಹಾಗೂ ಭಕ್ತಾದಿಗಳು ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಸೀಮೆಯ ಎಲ್ಲಾ ಸದ್ಭಕ್ತ ಬಂಧುಗಳು ಯಾಗದಲ್ಲಿ ಭಾಗಿಗಳಾಗುವಂತೆ ಕರೆ ನೀಡಲಾಯಿತು.