HEALTH TIPS

ವಿ ಬಿ ಕುಳಮರ್ವರ ಕುರಿತ ಕೃತಿ ಬಿಡುಗಡೆ ನ.1ರಂದು: ಕಾಂತಾವರ ಕನ್ನಡ ಸಂಘದಲ್ಲಿ ನಾಡಿಗೆ ನಮಸ್ಕಾರ ಕೃತಿ

           ಬದಿಯಡ್ಕ : ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣತಜ್ಞರಾದ ಶ್ರೀ ವಿ ಬಿ ಕುಳಮರ್ವ ಅವರ ಕುರಿತಾದ 'ಗಡಿನಾಡಿನ ಸಾಹಿತ್ಯ ಶ್ರೀನಿಧಿ - ವಿ ಬಿ ಕುಳಮರ್ವ' ಕೃತಿಯು 2023 ನವಂಬರ್ 1ರಂದು ಬೆಳಗ್ಗೆ 10 ಗಂಟೆಗೆ ಕಾಂತಾವರದ ಕನ್ನಡ ಸಂಘದ ಆಶ್ರಯದಲ್ಲಿ ನಡೆಯುವ ಕಾಂತಾವರ ಉತ್ಸವ-2023ರಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಯನ್ನು ಕಾಸರಗೋಡಿನ ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಬರೆದಿದ್ದಾರೆ. ಕಾಂತಾವರದ ರಥಬೀದಿಯ ಕನ್ನಡ ಸಂಘದ 'ನಾಡಿಗೆ ನಮಸ್ಕಾರ' ಗ್ರಂಥಮಾಲೆಯ 335ನೇ ಕೃತಿಯಾಗಿ ಇದು ಲೋಕಾರ್ಪಣೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಒಟ್ಟು 10 ಕೃತಿಗಳು ಬಿಡುಗಡೆಯಾಗಲಿದ್ದು, ಎಲ್ಲಾ ಕೃತಿಗಳ ಕುರಿತು ಕೃತಿಗಳ ಸಂಪಾದಕರಾದ ಡಾ.ಬಿ ಜನಾರ್ಧನ ಭಟ್ ಬೆಳ್ಮಣ್ಣು ಮಾತನಾಡುವರು. 


            ಕುಂಬಳೆ ಸಮೀಪದ ನಾರಾಯಣಮಂಗಲದ ವಿ ಬಿ ಕುಳಮರ್ವ ಅವರು ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಶಿಕ್ಷಕರಾಗಿ ನಿವೃತ್ತರಾದವರು. ಅನೇಕ ಕನ್ನಡ ಪರ ಸಮಾವೇಶದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅನೇಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಪಡೆದಿದ್ದಾರೆ. ಇವರು ಶ್ರೀಪಾರ್ಥಸಾರಥಿ, ಕಾರಂಜಿ, ಸುಲಭ ರಾಮಾಯಣ, ವ್ಯವಹಾರ ಮಾರ್ಗದರ್ಶಿ, ಒಳದನಿ, ದೀಪಿಕೆ ಸೇರಿದಂತೆ ಅನೇಕ ಕೃತಿಗಳನ್ನೂ ಬರೆದಿದ್ದಾರೆ. ವಿ ಬಿ ಕುಳಮರ್ವ ಅವರು ಬರೆದ 'ಹವಿ-ಸವಿ ಕೋಶ' ಹವ್ಯಕ - ಕನ್ನಡ ನಿಘಂಟು ಜನಪ್ರಿಯವಾಗಿದೆ. ಅನೇಕ ಶಿಬಿರಗಳ ಸಂಪನ್ಮೂಲ ವ್ಯಕ್ತಿಯಾಗಿ, ಸಂಘಟಕರಾಗಿ, ಸಾಹಿತ್ಯ ಮತ್ತು ಗಮಕ ಕ್ಷೇತ್ರದಲ್ಲಿ ಸದಾ ಚಟುವಟಿಕೆಯಲ್ಲಿದ್ದಾರೆ.  ಇದೀಗ ಪತ್ನಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮಿ ಕುಳಮರ್ವ ಅವರ ಜತೆಗೆ ನಿವೃತ್ತ ಜೀವನ ನಡೆಸುತ್ತಿರುವ ವಿ ಬಿ ಕುಳಮರ್ವ ಅವರು ಅನೇಕ ಸಂಶೋಧಕರಿಗೆ, ಸಆಹಿತ್ಯ ಆಸಕ್ತರಿಗೆ ತಮ್ಮ ಮನೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರು 30 ವರ್ಷಗಳ ಕಾಲ ಕೇರಳ ರಾಜ್ಯ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿಯೂ, ಸಂಪನ್ಮೂಲ ವ್ಯಕ್ತಿಯಾಗಿಯೂ ಇದ್ದರು. ಅಧ್ಯಾಪಕ ತರಬೇತಿಯ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿಯೂ ಹಲವಾರು ಸಾಹಿತ್ಯ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ರಾಜ್ಯಮಟ್ಟದ ಅಂಗೀಕೃತ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries