HEALTH TIPS

ಇದಪ್ಪಾ ಅದೃಷ್ಟ! ಮಾರಾಟವಾಗದೇ ಉಳಿದಿದ್ದ ಲಾಟರಿಯಿಂದ 1 ಕೋಟಿ ರೂ. ಬಹುಮಾನ ಗೆದ್ದ ಏಜೆಂಟ್​

                 ಕೊಚ್ಚಿ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

               ಲಾಟರಿ ಏಜೆಂಟ್​ಗೆ ಟಿಕೆಟ್​ ಮಾರಾಟವಾದರೆ ಮಾತ್ರ ಬದುಕು. ಆದರೆ, ಮಾರಾಟವಾಗದೇ ಉಳಿದ ಟಿಕೆಟ್​ನಿಂದಲೇ ಕೋಟಿ ರೂಪಾಯಿ ಬಹುಮಾನ ಬಂದಿರುವುದು ನಿಜಕ್ಕೂ ಲಕ್​. ಆ ಅದೃಷ್ಟಶಾಲಿಯೇ ಎನ್​.ಕೆ. ಗಂಗಾಧರನ್​.

                  ಗಂಗಾಧರನ್​ ಅವರು ಸುಮಾರು 33 ವರ್ಷಗಳ ಕಾಲ ಬಸ್​ ಕಂಡಕ್ಟರ್​ ಆಗಿ ಕೆಲಸ ಮಾಡಿದ್ದಾರೆ. ಕೇವಲ 4 ವರ್ಷಗಳ ಹಿಂದಷ್ಟೇ ತನ್ನ ವೃತ್ತಿ ಜೀವನವನ್ನು ಬಸ್​ ನಿರ್ವಾಹಕನಿಂದ ಲಾಟರಿ ಏಜೆಂಟ್ ಆಗಿ ಬದಲಾಯಿಸಿಕೊಂಡಿದ್ದಾರೆ.​ ಗಂಗಾಧರನ್​ ಅವರು ವೇಲೂರ್​ ಮೂಲದವರು. ಕೋಯಿಕ್ಕೋಡ್​ನ ಅಥೋಲಿಯಲ್ಲಿ ಲಾಟರಿ ಶಾಪ್​ ನಡೆಸುತ್ತಿದ್ದರು. ಮಾರಾಟವಾಗದೇ ಉಳಿದ ಲಾಟರಿ ಟಿಕೆಟ್​ನಿಂದ 1 ಕೋಟಿ ರೂಪಾಯಿ ಬಹುಮಾನ ಬಂದಿದೆ. ಸರ್ಕಾರದ ಫಿಫ್ಟಿ ಫಿಫ್ಟಿ ಲಾಟರಿ ವಿಭಾಗದಲ್ಲಿ ಗಂಗಾಧರ್​ಗೆ ಜಾಕ್​ಪಾಟ್​ ಹೊಡೆದಿದೆ.

                  ಗಂಗಾಧರ್​ ಅವರ ಅಂಗಡಿಯಿಂದ ಲಾಟರಿ ಖರೀದಿಸಿದ್ದ ಆರು ಮಂದಿಗೂ ತಲಾ 5000 ಸಾವಿರ ರೂ. ಬಹಮಾನ ಬಂದಿದೆ. ಗಂಗಾಧರ್​ ಅವರ ಅದೃಷ್ಟ ಅವರ ಲಾಟರಿ ಅಂಗಡಿಯ ಅದೃಷ್ಟವನ್ನೂ ಬದಲಾಯಿಸಿದೆ. ಇದೀಗ ಕೋಯಿಕ್ಕೋಡ್​ನ ಅಥೋಲಿಯಲ್ಲಿ ಅವರ ಲಾಟರಿ ಅಂಗಡಿ ಬಹಳ ಸದ್ದು ಮಾಡುತ್ತಿದೆ.

                                          ಇನ್ನೂ ಕೈಸೇರಿಲ್ಲ ಓಣಂ ಬಂಪರ್ ಹಣ

              ಈ ವರ್ಷದ ಓಣಂ ಬಂಪರ್​ ಲಾಟರಿಯ ಫಲಿತಾಂಶವನ್ನು ಸೆ.22ರಂದು ಘೋಷಣೆ ಮಾಡಲಾಯಿತು. ಈ ಬಾರಿ 75 ಲಕ್ಷಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್​ ಖರೀದಿ ಮಾಡಿದರು. ತಮಿಳುನಾಡು ಮೂಲದ ಪಾಂಡ್ಯರಾಜ್, ನಟರಾಜ್, ಕುಪ್ಪುಸಾಮಿ ಮತ್ತು ರಾಮಸ್ವಾಮಿಗೆ 25 ಕೋಟಿ ರೂ. ಓಣಂ ಬಂಪರ್ ಲಾಟರಿ ಒಲಿದಿದೆ. ಆದರೆ, ಹಣ ಮಾತ್ರ ಇನ್ನೂ ಕೈ ಸೇರಿಲ್ಲ. ಅದಕ್ಕೆ ಕಾರಣ ಏನೆಂದರೆ, 25 ಕೋಟಿ ರೂ. ಮೌಲ್ಯದ ಟಿಕೆಟ್ ತಮಿಳುನಾಡಿನ ಕಾಳಸಂತೆಯಲ್ಲಿ ಮಾರಾಟವಾಗಿದೆ ಎಂಬ ಆರೋಪ ಕೇಳಿಬಂದಿದೆ. ಅದನ್ನು ಪತ್ತೆ ಹಚ್ಚಲು ಲಾಟರಿ ಇಲಾಖೆ ತನಿಖೆ ಆರಂಭಿಸಿದೆ. ಜಂಟಿ ನಿರ್ದೇಶಕರು ಮತ್ತು ಹಣಕಾಸು ಅಧಿಕಾರಿಯನ್ನು ಒಳಗೊಂಡ ಏಳು ಸದಸ್ಯರ ತಂಡದ ತನಿಖಾ ವರದಿಯ ಮೇಲೆ ಮೊದಲ ಬಹುಮಾನ ವಿಜೇತರ ಭವಿಷ್ಯ ನಿರ್ಧಾರವಾಗಲಿದೆ.

ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುವಂತಿಲ್ಲ

                    ಕಾನೂನಿನ ಪ್ರಕಾರ ಕೇರಳ ಲಾಟರಿಯನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುವಂತಿಲ್ಲ. ಬಹುಮಾನ ವಿಜೇತರು ಕೇರಳಕ್ಕೆ ಬರಲು ಕಾರಣಗಳನ್ನೂ ಪರಿಶೀಲಿಸಲಾಗುವುದು. ಬಹುಮಾನ ವಿಜೇತರು ಲಾಟರಿ ಖರೀದಿ ಮಾಡಿರುವ ಏಜೆನ್ಸಿಯಲ್ಲಿ ವಿಚಾರಣೆ ನಡೆಸಲಾಗುವುದು ಮತ್ತು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಯಾವುದೇ ದೂರುಗಳಿಲ್ಲದಿದ್ದರೂ, ಲಾಟರಿ ಬಹುಮಾನವನ್ನು ಬೇರೆ ರಾಜ್ಯದವರು ಪಡೆದರೆ ಆ ಸಂದರ್ಭದಲ್ಲೂ ಸಮಿತಿ ಪರಿಶೀಲಿಸಿದ ನಂತರವೇ ಬಹುಮಾನವನ್ನು ಹಸ್ತಾಂತರಿಸಲಾಗುತ್ತದೆ. ಈ ಬಾರಿ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ಬಲಗೊಂಡಿದೆ.

                     ಸಾಮಾನ್ಯ ವಾರದ ಲಾಟರಿಗಳ ಜೊತೆಗೆ ಕೇರಳ ರಾಜ್ಯದ ಲಾಟರಿ ಇಲಾಖೆಯು ಕ್ರಿಸ್ಮಸ್, ಬೇಸಿಗೆ, ವಿಷು, ಮಾನ್ಸೂನ್ ಮತ್ತು ತಿರುವೋಣಂ ಮುಂತಾದ ಹಬ್ಬದ ಸಂದರ್ಭಗಳಲ್ಲಿ 'ಬಂಪರ್' ಎಂದು ಕರೆಯಲ್ಪಡುವ ವಿಶೇಷ ಋತುಮಾನದ ಲಾಟರಿಗಳನ್ನು ಪ್ರತೀ ವರ್ಷ ಹೊರತರುತ್ತದೆ. ಈ ಲಾಟರಿ ಉಪಕ್ರಮಗಳು ರಾಜ್ಯದಲ್ಲಿ ಆದಾಯವನ್ನು ಗಳಿಸುವ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸರ್ಕಾರದ ಉದ್ದೇಶಗಳೊಂದಿಗೆ ಜೋಡಿಸಲ್ಪಟ್ಟಿವೆ. ಆದರೆ, ಅನೇಕ ಕುಟುಂಬಗಳ ಮೇಲೆ ಇದೇ ಲಾಟರಿಯು ಪರಿಣಾಮ ಬೀರಿದೆ. ಅಲ್ಲದೆ, ಕೆಲವರು ಲಕ್ಷಾಧಿಪತಿಗಳು ಹಾಗೂ ಕೋಟ್ಯಧಿಪತಿಗಳು ಸಹ ಆಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries