ಕಾಸರಗೋಡು: ಕೇರಳ ರಾಜ್ಯೋತ್ಸವ ದಿನವದ ನ.1ರಂದು ಕಾಸರಗೋಡು ಜಿಲ್ಲೆಯ ನೀಲೇಶ್ವರ ಕೋಟ್ಗಟಪ್ಪಾರದ ತೇಜಸ್ವಿನಿ ಹೊಳೆಯಲ್ಲಿ ನಡೆಯಲಿರುಮ್ದತ್ತರ ಮಲಬಾರ್ ಜಲೋತ್ಸವ ಕಾರ್ಯಕ್ರಮದ ಯಶಸ್ಸಿಗಾಗಿ ಸಿದ್ಧತಾ ಕಾರ್ಐಗಳ ಅವಲೋಕನ ಕೋಟಪುರ ಅಚ್ಚಾಂತುರ್ತಿ ಸೇತುವೆ ಸನಿಹ ಜರುಗಿತು.
ಸಂಘಟನಾ ಸಮಿತಿ ರಚನಾ ಸಭೆಯನ್ನು ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು. ಮಲಬಾರ್ ಜಲೋತ್ಸವ ರಾಜ್ಯದ ಉತ್ಸವಾಗಿ ಮೂಡಿಬರಬೇಕಾಗಿದ್ದು, ಇದಕ್ಕಾಗಿ ಸಹಕಾರಿ ಮನೋಭಾವದಿಂದ ಪ್ರತಿಯೊಬ್ಬ ಕೈಜೋಡಿಸಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು. ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ.ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು.
ಕೋವಿಡ್ ಮತ್ತು ಕೋವಿಡ್ ನಂತರದ ಬಿಕ್ಕಟ್ಟುಗಳಿಂದಾಗಿ ಸ್ಥಗಿತಗೊಂಡಿದ್ದ ಉತ್ತರ ಮಲಬಾರ್ ಜಲೋತ್ಸವವನ್ನು ಪುನರಾರಂಭಗೊಳಿಸಲಾಗುತ್ತಿದ್ದು, ಹೆಚ್ಚಿನ ಸಂಭ್ರಮಾಚರಣೆಯೊಂದಿಗೆ ಉತ್ಸವವನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನೀಲೇಶ್ವರಂ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ನೀಲೇಶ್ವರ ನಗರಸಭೆ ಉಪಾಧ್ಯಕ್ಷ ಪಿ.ಪಿ.ಮಹಮ್ಮದ್ ರಫಿ, ಚೆರುವತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ವಿ. ರಾಘವನ್, ವಾರ್ಡ್ ಸದಸ್ಯ ಶ್ರೀಜಿತ್, ನೀಲೇಶ್ವರ ನಗರಸಭಾ ಸದಸ್ಯ ಶಂಸುದ್ದೀನ್ ಅರಿಂಚಿರ, ಕರಾವಳಿ ಪೊಲೀಸ್ ಠಾಣೆ ಸಿಐ ಅನಿಲ್ ಕುಮಾರ್, ಜನಪ್ರತಿನಿಧಿಗಳು, ಸ್ಥಳೀಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಯ ಕಾರ್ಯದರ್ಶಿ ಲಿಜೋ ಜೋಸೆಫ್ ಸ್ವಾಗತಿಸಿದರು. ಚೆರುವತ್ತೂರು ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ರಮಣಿ ವಂದಿಸಿದರು.
ಕಾರ್ಯಕ್ರಮದ ಯಶಸ್ಸಿಗಗಿ 501 ಸದಸ್ಯರ ಸಂಘಟನಾ ಸಮಿತಿಯನ್ನು ರಚಿಸಲಾಯಿತು. ಶಾಸಕ ಎಂ.ರಾಜಗೋಪಾಲನ್ ಶಾಸಕರ ಅಧ್ಯಕ್ಷ, ಡಿಟಿಪಿಸಿಯ ಕಾರ್ಯದರ್ಶಿ ಲಿಜೋ ಜೋಸೆಫ್ ಸಂಚಾಲಕ ಹಾಗೂ 501 ಸದಸ್ಯರನ್ನೊಳಗೊಂಡ ಸಂಘಟನಾ ಸಮಿತಿಯನ್ನು ರಚಿಸಲಾಯಿತು.