HEALTH TIPS

ಭಾರತ-ಬಾಂಗ್ಲಾದೇಶ ರೈಲ್ವೆ ಯೋಜನೆಗೆ ನ.1ರಂದು ಪ್ರಧಾನಿ ಮೋದಿ ಹಸಿರು ನಿಶಾನೆ

                ಗರ್ತಲಾ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಉಭಯ ದೇಶಗಳ ನಡುವಿನ ಅಗರ್ತಲಾ- ಅಖೌರಾ ರೈಲ್ವೆ ಯೋಜನೆಗೆ ಬುಧವಾರ ವರ್ಚುವಲ್ ಆಗಿ ಹಸಿರು ನಿಶಾನೆ ತೋರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

                 15 ಕಿ.ಮೀ ಉದ್ದದ ರೈಲು ಯೋಜನೆಯು (ಭಾರತದಲ್ಲಿ 5 ಕಿ.ಮೀ ಮತ್ತು ಬಾಂಗ್ಲಾದಲ್ಲಿ 10 ಕಿ.ಮೀ) ಉಭಯ ರಾಷ್ಟ್ರಗಳ ನಡುವಣ ವಾಣಿಜ್ಯ ಚಟುವಟಿಕೆಗೆ ಉತ್ತೇಜನ ನೀಡಲಿದೆ ಮತ್ತು ಢಾಕಾ ಮೂಲಕ ಅರ್ಗತಲಾ-ಕೋಲ್ಕತ್ತ ನಡುವಣ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಎಂದು ಹೇಳಿದರು.

                ಸದ್ಯ ರೈಲಿನಲ್ಲಿ ಕೋಲ್ಕತ್ತದಿಂದ ಅಗರ್ತಲಾಕ್ಕೆ ತೆರಳಲು 31 ಗಂಟೆ ಹಿಡಿಯುತ್ತಿದೆ. ನೂತನ ಯೋಜನೆಯಿಂದ 10 ಗಂಟೆ ಕಡಿಮೆಯಾಗಲಿದೆ ಎಂದರು.

                  ಯೋಜನೆಗೆ ಭಾರತದ ರೈಲ್ವೆ ಸಚಿವಾಯಲವು ತನ್ನ ಬಜೆಟ್‌ನಲ್ಲಿ ₹153.84 ಕೋಟಿ ಮೀಸಲಿಟ್ಟಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries