ಹಾಂಗ್‌ಝೌ : 2023ರ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು ಪದಕ ಬೇಟೆ ಮುಂದುವರೆದಿದೆ. ಇಂದು ಭಾರತಕ್ಕೆ ಮೂರು ಚಿನ್ನದ ಪದಕ ಬಂದಿದೆ.
ಆರ್ಚರಿಯಲ್ಲಿ ಭಾರತದ ಮಹಿಳಾ ತಂಡ ಹಾಗೂ ಪುರುಷರ ತಂಡ ಸಹ ಚಿನ್ನದ ಪದಕ ಗೆದ್ದಿದೆ. ವಿಜೆ ಸುರೇಖಾ, ಪರ್ಣೀತ್ ಕೌರ್ ಮತ್ತು ಅದಿತಿ ಗೋಪಿಚಂದ್ ಅವರನ್ನೊಳಗೊಂಡ ಭಾರತ ತಂಡ ಚೈನಿಸ್ ತೈಪೇ ತಂಡವನ್ನು 230-229 ಅಂಕಗಳೊಂದಿಗೆ ಮಣಿಸಿದೆ.
ಆರ್ಚರಿಯಲ್ಲಿ ಒಜಸ್, ಪ್ರಥಮೇಶ್ ಮತ್ತು ಅಭಿಶೇಕ್ ಒಳಗೊಂಡ ಭಾರತದ ಪುರುಷರ ತಂಡ ದಕ್ಷಿಣ ಕೊರಿಯಾ ತಂಡವನ್ನು 235-230 ಅಂಕಗಳೊಂದಿಗೆ ಮಣಿಸುವ ಮೂಲಕ ಚಿನ್ನಕ್ಕೆ ಮುತ್ತಿಟ್ಟಿದೆ.
ಸ್ಕ್ವ್ಯಾಷ್ ನ ಮಿಶ್ರಾ ಡಬಲ್ಸ್ ಫೈನಲ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಬಂದಿದೆ. ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೌರವ್ ಘೋಸಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಜೋಡಿ ಮಲೇಷ್ಯಾ ಜೋಡಿಯನ್ನು 2-0(11-10, 11-10) ಅಂತರದಿಂದ ಮಣಿಸಿ ಚಿನ್ನದ ಪದಕವನ್ನು ಗೆದ್ದಿತ್ತು.
ಕುಸ್ತಿಯ ಫ್ರೀಸ್ಟೈಲ್ 53ಕೆಜಿ ವಿಭಾಗದಲ್ಲಿ ಭಾರತದ ಅಂತಿಮ್ ಕಂಚಿನ ಪದಕ ಗೆದ್ದಿದ್ದಾರೆ.
ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಇಲ್ಲಿಯವರೆಗೂ 21 ಚಿನ್ನ, 32 ಬೆಳ್ಳಿ ಮತ್ತು 33 ಕಂಚಿನ ಪದಕದೊಂದಿಗೆ 86 ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಕಳೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟಾರೆ 70 ಪದಕಗಳನ್ನು ಮಾತ್ರ ಗೆದ್ದಿತ್ತು.