ತಿರುವನಂತಪುರಂ: ಕೇರಳದ ಇದುವರೆಗಿನ ಸಾಧನೆಗಳ ಪ್ರದರ್ಶನದೊಂದಿಗೆ ನವೆಂಬರ್ ಒಂದರಿಂದ ಏಳರವರೆಗೆ ತಿರುವನಂತಪುರದಲ್ಲಿ ರಾಜ್ಯ ಸರ್ಕಾರ ಆಯೋಜಿಸುವ 'ಕೇರಳೀಯಂ-2023'ರ ಜನೋತ್ಸವ ಕಾರ್ಯಕ್ರಮಕ್ಕೆ ಶುಭಕೋರುವ ವೀಡಿಯೊ ಸಂದೇಶದೊಂದಿಗೆ ಸೂಪರ್‍ಸ್ಟಾರ್ ಮೋಹನ್‍ಲಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಮೋಹನ್‍ಲಾಲ್ ಅವರ ಈ ವಿಡಿಯೋವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಅಪೆÇ್ಲೀಡ್ ಮಾಡಿದ್ದಾರೆ.
ಮಲಯಾಳಿಯಾಗಿ ಎರಡು ವಿಷಯಗಳ ಬಗ್ಗೆ ತನಗೆ ಹೆಮ್ಮೆ ಇದೆ ಎಂದು ಮೋಹನ್‍ಲಾಲ್ ತಮ್ಮ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ. ಜಗತ್ತಿನ ಯಾವ ಮೂಲೆಗೆ ಹೋದರೂ ಕೇರಳವನ್ನು ಶಿಕ್ಷಣ ಮತ್ತು ಆರೋಗ್ಯದ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಇದು ಮಲಯಾಳಿಗಳಿಗೆ ಮಾತ್ರ ಸೇರಿದ್ದು. ನಾನು ಮಲೆಯಾಳ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಮಲೆಯಾಳಿಯಾಗಿದ್ದಕ್ಕೆ ಮತ್ತು ಕೇರಳದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಮೋಹನ್‍ಲಾಲ್ ಶುಭಾಶಯ ಸಂದೇಶದಲ್ಲಿ ಹೇಳಿದ್ದಾರೆ.
ಕೇರಳೀಯಂಗೆ ಶುಭ ಕೋರುವ ವೀಡಿಯೊ ಸಂದೇಶಗಳೊಂದಿಗೆ ಮಲಯಾಳಿಗಳ ನೆಚ್ಚಿನ ಗಾಯಕಿ ಕೆ.ಎಸ್.ಚಿತ್ರ, ಯುವನಟ ಶೇನ್ ನಿಗಮ್, ಸಿನಿಮಾ ನಿರ್ಮಾಪಕಿ ಸಾಂದ್ರಾ ಥಾಮಸ್, ಲೇಖಕ ಜಿ.ಆರ್.ಇಂದುಗೋಪನ್ ಹಾಗೂ ಸಿನಿಮಾ, ಸಂಸ್ಕøತಿ, ಸಾಹಿತ್ಯ ರಂಗಗಳ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.