ಮಂಜೇಶ್ವರ: ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಭವಿಷ್ಯದ ಅಭಿವೃದ್ಧಿಯ ದೃಷ್ಟಿಕೋನವನ್ನು ಜನರಿಗೆ ತಿಳಿಸಲು ಮತ್ತು ಜನರೊಂದಿಗೆ ಸಂವಹನ ನಡೆಸಲು, ಮುಖ್ಯಮಂತ್ರಿ ಮತ್ತು 20 ಸಚಿವರ ನೇತೃತ್ವದಲ್ಲಿ ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಲ್ಲಿ ನವಕೇರಳ ಸಮಾವೇಶ ನಡೆಯಲಿದೆ. ನವೆಂಬರ್ 18 ರಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಈ ಸಮಾವೇಶ ಆರಂಭಗೊಳ್ಳಲಿದೆ.
ನ.18 ರಂದು ಅಪರಾಹ್ನ 3 ಕ್ಕೆ ಪೈವಳಿಕೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿರುವ ನವಕೇರಳ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಾವೇಶದ ಭಾಗವಾಗಿ ಸಂಘಟನಾ ಸಮಿತಿ ಸಭೆ ಪೈವಳಿಕೆ ಲಾಲ್‍ಬಾಗ್ ಕುಲಾಲ ಸಮಾಜ ಮಂದಿರದಲ್ಲಿ ಸೋಮವಾರ ಜರಗಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸಭೆ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಹಾಗೂ ಕಾಸರಗೋಡು ಆರ್‍ಡಿಒ ಅತುಲ್ ಸ್ವಾಮಿನಾಥ್ ಸಂಚಾಲಕರಾಗಿ ಸಂಘಟನಾ ಸಮಿತಿ ಹಾಗೂ ಆರು ಉಪಸಮಿತಿಗಳನ್ನು ರಚಿಸಲಾಯಿತು. ಪ್ರತಿನಿಧಿಗಳನ್ನು ಅಧ್ಯಕ್ಷರು ಮತ್ತು ಅಧಿಕಾರಿಗಳು ಸಂಚಾಲಕರಾಗಿ ಉಪಸಮಿತಿ ರಚಿಸಲಾಗಿದೆ. ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಸುಬ್ಬಣ್ಣ ಆಳ್ವ (ಪುತ್ತಿಗೆ), ಕೆ.ಜಯಂತಿ (ಪೈವಳಿಕೆ), ಎಸ್.ಭಾರತಿ (ವರ್ಕಾಡಿ), ಜೀನ್ ಲವಿನಾ ಮೊಂತೇರೊ(ಮಂಜೇಶ್ವರ), ಸುಂದರಿ ಆರ್.ಶೆಟ್ಟಿ (ಮೀಂಜ) ಅವರು ಪಂಚಾಯತಿ ಮಟ್ಟದಲ್ಲಿ ಸ್ಥಳೀಯ ಸಂಘಟನಾ ಸಮಿತಿಯನ್ನು ರಚಿಸಲಿದ್ದಾರೆ.
ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಜನರ ಸಮಸ್ಯೆ ಆಲಿಸಲು ಮುಖ್ಯಮಂತ್ರಿ ಹಾಗೂ 20 ಸಚಿವರು ಆಗಮಿಸುತ್ತಿದ್ದು, ಮಂಜೇಶ್ವರದಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ನವಕೇರಳ ಸಮಾವೇಶ ಯಶಸ್ವಿಗೊಳಿಸಲು ಜಿಲ್ಲಾಡಳಿತ ವ್ಯವಸ್ಥೆ ಒಗ್ಗೂಡಿ ಶ್ರಮಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕರಿಂದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಹೆಚ್ಚು ಗಮನ ಹರಿಸಬೇಕಾದ ಸಮಸ್ಯೆಗಳನ್ನು ಅರಿಯಲು ನವಕೇರಳ ಸಭೆ ನಡೆಸಲಾಗುತ್ತಿದ್ದು, ಮಂಜೇಶ್ವರದÀ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು. ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ವಿ.ವಿ.ರಾಜನ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಾತನಾಡಿದರು. ಎಡಿಎಂ ಕೆ.ನವೀನ್ ಬಾಬು ಸ್ವಾಗತಿಸಿ, ಕಾಸರಗೋಡು ಆರ್.ಡಿ.ಒ. ಅತುಲ್ ಸ್ವಾಮಿನಾಥ್ ವಂದಿಸಿದರು. ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರು, ಕಲೆ, ಸಂಸ್ಕøತಿ, ಸಮಾಜ ಕ್ಷೇತ್ರದ ಪ್ರಮುಖರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಭಾಗವಹಿಸಿದ್ದರು.