ಮಂಜೇಶ್ವರ: ನವಕೇರಳ ನಿರ್ಮಾಣದ ಅಂಗವಾಗಿ ರಾಜ್ಯ ಸರ್ಕಾರ ಈಗಾಗಲೇ ಸಾಧಿಸಿರುವ ಪ್ರಗತಿಯ ಕುರಿತು ಜನರೊಂದಿಗೆ ಮತ್ತಷ್ಟು ಸಂವಾದ ನಡೆಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಸಚಿವರು ನವಕೇರಳ ಸಮಾವೇಶ ಆಯೋಜಿಸುತ್ತಿದೆ. ರಾಜ್ಯದ ಮೊದಲ ನವ ಕೇರಳ ಸಭೆಯು ನವೆಂಬರ್ 18 ರಂದು ಮಧ್ಯಾಹ್ನ 3.30 ಕ್ಕೆ ಮಂಜೇಶ್ವರ ತಾಲೂಕು ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಮಂಜೇಶ್ವರ ಕ್ಷೇತ್ರ ಸಂಘಟನಾ ಸಮಿತಿ ಸಭೆ ಇಂದು(ಅಕ್ಟೋಬರ್ 9)ಸಂಜೆ 4 ಕ್ಕೆ ಪೈವಳಿಕೆ ಕಾಯರ್ಕಟ್ಟೆಯಲ್ಲಿರುವ ಕುಲಾಲ ಸಮಾಜ ಮಂದಿರ ಸಭಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.