HEALTH TIPS

ಸಂಕಲ್ಪ ಸಪ್ತಾಹ : 2024ರ ಅಕ್ಟೋಬರ್‌ಗೆ ಮತ್ತೆ ಸಿಗೋಣ: ಪ್ರಧಾನಿ ಮೋದಿ

             ವದೆಹಲಿ: 'ಮಹತ್ವಾಕಾಂಕ್ಷೆಯ ಜಿಲ್ಲೆಗಳು' ಕಾರ್ಯಕ್ರಮದ ಆಧಾರದಲ್ಲಿ 'ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು' ಕಾರ್ಯಕ್ರಮವನ್ನು ರೂಪಿಸಿದ್ದು, ಇದರ ಯಶಸ್ಸು ಪರಿಶೀಲಿಸಲು ಮುಂದಿನ ವರ್ಷ ನಾನೇ ಬರುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

                 'ಸಂಕಲ್ಪ ಸಪ್ತಾಹ' ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಇಲ್ಲಿ ಮಾತನಾಡಿದರು.


                      'ಮಹತ್ವಾಕಾಂಕ್ಷೆಯ ಜಿಲ್ಲೆಗಳು' ಕಾರ್ಯಕ್ರಮವು 112 ಜಿಲ್ಲೆಗಳಲ್ಲಿ 25 ಕೋಟಿಗೂ ಅಧಿಕ ಜನರ ಜೀವನಗತಿಯನ್ನೇ ಬದಲಿಸಿದೆ. ಜೀವನದ ಗುಣಮಟ್ಟ ಸುಧಾರಿಸಿದೆ. ಅಂತೆಯೇ ಮುಂದಿನ ಒಂದು ವರ್ಷದಲ್ಲಿ ಕನಿಷ್ಠ 100 ಬ್ಲಾಕ್‌ಗಳು ಅಭಿವೃದ್ಧಿ ಕಾಣಲಿವೆ' ಎಂದು ಮೋದಿ ಹೇಳಿದರು.

             'ಇದು, ಈಗ ಮಹಾತ್ವಾಕಾಂಕ್ಷೆಯ ಬ್ಲಾಕ್‌ಗಳು ಕಾರ್ಯಕ್ರಮದ ಜಾರಿಗೂ ಪ್ರೇರಣೆಯಾಗಿದೆ' ಎಂದು ಬ್ಲಾಕ್ ಹಂತದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ 'ಸಂಕಲ್ಪ ಸಪ್ತಾಹ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

             'ನನಗೆ ವಿಶ್ವಾಸವಿದೆ. 2024ರ ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಿನಲ್ಲಿ ಮತ್ತೆ ಭೇಟಿಯಾಗೋಣ. 'ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು' ಕಾರ್ಯಕ್ರಮದ ಯಶಸ್ಸಿನ ಮೌಲ್ಯಮಾಪನ ಮಾಡೋಣ. 2024ರ ಅಕ್ಟೋಬರ್‌ನಲ್ಲಿ ನಿಮ್ಮ ಜೊತೆ ಮಾತನಾಡುತ್ತೇನೆ' ಎಂದು ಅವರು ಹೇಳಿದರು.

                 'ಭಾರತ ಮಂಟಪ'ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಅಧಿಕಾರಿಗಳು, 3000ಕ್ಕೂ ಹೆಚ್ಚು ಪಂಚಾಯತ್‌ ಮತ್ತು ಬ್ಲಾಕ್‌ ಹಂತದ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಲ್ಲದೇ ರೈತರು, ಸ್ಥಳೀಯರು, ಪಂಚಾಯಿತಿ ಹಂತದ ಅಧಿಕಾರಿಗಳು ಸೇರಿದಂತೆ ಎರಡು ಲಕ್ಷಕ್ಕೂ ಅಧಿಕ ಜನರು ವರ್ಚುವಲ್‌ ಸ್ವರೂಪದಲ್ಲಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries