ಕಾಸರಗೋಡು : ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುವ ಕುರಿತು ವಳಕುಂಜ ಮುರಳಿ ಕೃಷ್ಣ ಅವರ ನೇತೃತ್ವದಲ್ಲಿ ನಡೆದ ದೇವಪ್ರಶ್ನೆ ಚಿಂತನೆ ಪ್ರಕಾರ 2025 ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ತೀರ್ಮಾನಿಸಲಾಯಿತು.
ಕಾಮಗಾರಿ ಪೂರ್ತಿಗೊಳ್ಳದಿರುವುದು ಹಾಗೂ 2024ರ ಏಪ್ರಿಲ್ ವರೆಗೆ ಸೂಕ್ತ ದಿನಾಂಕ ಲಭ್ಯವಿಲ್ಲದ ಕಾರಣ 2025ಕ್ಕೆ ಮುಂದೂಡಲಾಗಿದೆ.
ದೇವಸ್ಥಾನದ ಮುಖ್ಯ ಅರ್ಚಕರು, ಸಹಾಯಕ ಅರ್ಚಕರು, ಪವಿತ್ರಾಪಾಣಿ, ಎಂಟುಮನೆ ಪ್ರತಿನಿಧಿಗಳು, ಮಲಬಾರ್ ದೇವಸ್ವಂ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ, ದೇವಸ್ಥಾನದ ಸಿಬ್ಬಂದಿ, ಸುಧಾರಣಾ ಸಮಿತಿ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಸೇರಿ ಕೈಗೊಂಡ ನಿರ್ಣಯಾನುಸಾರ 2025ರಲ್ಲಿ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಪಡಿಸಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಪ್ರಕಟಣೆ ತಿಳಿಸಿದೆ.