HEALTH TIPS

2035ಕ್ಕೆ ಬಾಹ್ಯಾಕಾಶ ನಿಲ್ದಾಣ, 2040- ಚಂದ್ರನ ಅಂಗಳಕ್ಕೆ ಮಾನವ ಗುರಿ: ಮೋದಿ

             ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳೊಂದಿಗೆ ಮಂಗಳವಾರ ಸಭೆ ನಡೆಸಿ, 2035ರ ಹೊತ್ತಿಗೆ ಬಾಹ್ಯಾಕಾಶ ನಿಲ್ದಾಣ ಸಿದ್ಧಪಡಿಸುವುದು ಹಾಗೂ 2040ರ ಹೊತ್ತಿಗೆ ಚಂದ್ರನ ಅಂಗಳಕ್ಕೆ ಮಾನವನನ್ನು ಕಳುಹಿಸುವ ಗುರಿಯನ್ನು ಹೊಂದುವಂತೆ ಸಲಹೆ ನೀಡಿದ್ದಾರೆ.

               ಗಗನಯಾನ ಯೋಜನೆ ಹಾಗೂ ಬಾಹ್ಯಾಕಾಶಕ್ಕೆ ತೆರಳುವ ನೌಕೆಯಲ್ಲಿರುವ ಗಗನ ಯಾತ್ರಿಗಳು ಅನಿರೀಕ್ಷಿತ ಅಪಾಯಗಳಿಂದ ಪಾರಾಗುವ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ಕುರಿತು ವಿಜ್ಞಾನಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

              'ಯೋಜನೆಯ ಸಿದ್ಧತೆ ಮತ್ತು 2025ರಲ್ಲಿ ಜಾರಿಗೊಳ್ಳುವ ಯೋಜನೆಗಳ ಸಿದ್ಧತೆಯ ಅವಲೋಕನ ಸಭೆ ಇದಾಗಿದೆ' ಎಂದು ಪ್ರಧಾನಿ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

           'ಭವಿಷ್ಯದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿನ ಆವಿಷ್ಕಾರಗಳ ಕುರಿತು ಪ್ರಧಾನಿ ಅವರು ವಿಜ್ಞಾನಿಗಳೊಂದಿಗೆ ಚರ್ಚಿಸಿದರು. ಶುಕ್ರ ಹಾಗೂ ಮಂಗಳ ಗ್ರಹಕ್ಕೆ ಲ್ಯಾಂಡರ್‌ ಕಳುಹಿಸುವ ಯೋಜನೆ ಒಳಗೊಂಡಂತೆ ಅಂತರಗ್ರಹ ಕಾರ್ಯಾಚರಣೆಗಳ ಕುರಿತು ವಿಜ್ಞಾನಿಗಳು ಹೆಚ್ಚಿನ ಕೆಲಸ ಮಾಡಬೇಕಿದೆ' ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.

              'ಇತ್ತೀಚಿನ ಚಂದ್ರಯಾನ-3 ಯೋಜನೆ ಹಾಗೂ ಆದಿತ್ಯ ಎಲ್‌1 ಯೋಜನೆಗಳ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, 'ಭಾರತ ಈಗ ಹೊಸ ಹಾಗೂ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಬೇಕಾಗಿದೆ. ಭಾರತೀಯ ಅಂತರಿಕ್ಷ ನಿಲ್ದಾಣದ ನಿರ್ಮಾಣ 2035ರ ಹೊತ್ತಿಗೆ ಆಗುವಂತೆ ಹಾಗೂ ಚಂದ್ರನ ಅಂಗಳಕ್ಕೆ ಮಾನವರ ಕಳುಹಿಸುವ ಯೋಜನೆ 2040ರೊಳಗೆ ಯಶಸ್ವಿಯಾಗುವಂತೆ ಯೋಜನೆ ರೂಪಿಸಬೇಕಿದೆ' ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries