HEALTH TIPS

ಚಂದ್ರನ ಮೇಲ್ಮೆ ಮೇಲೆ ಬೃಹತ್​ ಪ್ರಭಾವಲಯ; ಲ್ಯಾಂಡರ್​ ಸ್ಪರ್ಶದಿಂದ ಮೇಲೆದ್ದ 2.06 ಟನ್​ ಮಣ್ಣು!

               ವದೆಹಲಿ: ಆಗಸ್ಟ್​ನಲ್ಲಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಚಂದ್ರಯಾನ-3 ಮಿಷನ್​ನ ಲ್ಯಾಂಡರ್​ ಮಾಡ್ಯುಲ್​ ವಿಕ್ರಂ, ಚಂದ್ರನ ಮೇಲ್ಮೆಯ ಸುಮಾರು 2.06 ಟನ್​ ಮಣ್ಣನ್ನು ನೆಲೆತಪ್ಪಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಇದರ ಪರಿಣಾಮವಾಗಿ ವಿಕ್ರಂ ಇಳಿದ ಜಾಗದಲ್ಲಿ 'ಇಜೆಕ್ಟಾ ಹ್ಯಾಲೋ' ಎಂಬ ಚಂದ್ರನ ವಸ್ತುಗಳ ಬೃಹತ್​ ಪ್ರಭಾವಲಯ ಉಂಟಾಗಿತ್ತು.

              ಆಗಸ್ಟ್​ 23ರಂದು ಚಂದ್ರಯಾನ-3 ಮಿಷನ್​ ಚಂದ್ರನ ದಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿತ್ತು. ಅದಕ್ಕೆ ಶಿವಶಕ್ತಿ ಪಾಯಿಂಟ್​ ಎಂದು ಹೆಸರಿಸಲಾಗಿದ್ದು ಅಲ್ಲಿ ಲ್ಯಾಂಡರ್​ ವಿಕ್ರಂ ಮತ್ತು ರೋವರ್​ ಪ್ರಜ್ಞಾನ್​ ಚಂದ್ರನ ಮೇಲ್ಮೆಯನ್ನು ಸ್ಪರ್ಶಿಸಿದ್ದವು. ಚಂದ್ರನ ಮೇಲ್ಮೆಯನ್ನು ವಿಕ್ರಂ ಸ್ಪರ್ಶಿಸಿದ ವೇಳೆ ಅದರ 2.06 ಟನ್​ ರೆಗೋಲಿತ್​ಅನ್ನು (ಬಂಡೆ ಮತ್ತು ಮಣ್ಣು) ನೆಲೆ ತಪ್ಪಿಸಿದೆ ಎಂದು ಇಸ್ರೋ ವಿವರಿಸಿದೆ. ಇಸ್ರೋದ ಒಂದು ಭಾಗವಾಗಿರುವ ರಾಷ್ಟ್ರೀಯ ದೂರ ಸಂವೇದಿ ಕೇಂದ್ರದ (ಎನ್​ಆರ್​ಎಸ್​ಸಿ) ವಿಜ್ಞಾನಿಗಳು ಈ ವಿದ್ಯಮಾನವನ್ನು ಸೆರೆಹಿಡಿದು ವಿಶ್ಲೇಷಿಸಿದ್ದಾರೆ. ವಿಕ್ರಂ ಲ್ಯಾಂಡರ್​ ಸ್ಪರ್ಶದಿಂದ ಮೇಲೆದ್ದ ರೆಗೋಲಿತ್​ ಸುಮಾರು 108.4 ಚದರ ಮೀಟರ್​ ಪ್ರದೇಶದಲ್ಲಿ ಹರಡಿದೆ ಎಂದು ವಿಜ್ಞಾನಿಗಳ ವಿಶ್ಲೇಷಣೆ ತಿಳಿಸಿದೆ. ಚಂದ್ರಯಾನ-3 ಮಿಷನ್​, ಚಂದ್ರಯಾನ&2 ಮಿಷನ್​ನ ಫಾಲೋಅಪ್​ ಆಗಿದೆ.

                                           ಇಜೆಕ್ಟಾ ಹ್ಯಾಲೋ ಎಂದರೇನು?

               ಲ್ಯಾಂಡರ್​ ವಿಕ್ರಂ ಇಳಿಯುವ ಮುಂಚಿನ ಹಾಗೂ ಇಳಿದ ನಂತರದ ಹೈ ರಿಸಲ್ಯೂಶನ್​ ದೃಶ್ಯಗಳನ್ನು ವಿಜ್ಞಾನಿಗಳು ಹೋಲಿಸಿದ್ದಾರೆ. ಚಂದ್ರಯಾನ-2 ಆರ್ಬಿಟರ್​ನ ಆರ್ಬಿಟರ್​ ಹೈ-ರಿಸಲ್ಯೂಶನ್​ ಕ್ಯಾಮರಾದಿಂದ (ಒಎಚ್​ಆರ್​ಸಿ) ಅದನ್ನು ತೆಗೆಯಲಾಗಿತ್ತು. ಇಳಿಯುವ ಮುನ್ನ ಹಾಗೂ ನಂತರದ ಹಲವು ಗಂಟೆಗಳ ಅಂತರದಲ್ಲಿ ಈ ಚಿತ್ರಗಳನ್ನು ಸೆರೆಹಿಡಿಯಲಾಗಿತ್ತು. ಲ್ಯಾಂಡರ್​ನ ಸುತ್ತ ಒಂದು ಅನಿಯಮಿತವಾದ ಪ್ರಕಾಶಮಾನ ಅಂಶ ಕಂಡು ಬಂದಿದ್ದು ಅದನ್ನೇ 'ಇಜೆಕ್ಟಾ ಹ್ಯಾಲೋ' ಎಂದು ಕರೆಯಲಾಗುತ್ತದೆ. 'ಇಜೆಕ್ಟಾ ಹ್ಯಾಲೋ' ವಿದ್ಯಮಾನದ ವಿಸ್ತ್ರತ ವಿಶ್ಲೇಷಣೆ 'ಜರ್ನಲ್​ ಆಫ್​ ದಿ ಇಂಡಿಯನ್​ ಸೊಸೈಟಿ ಆಫ್ ರಿಮೋಟ್​ ಸೆನ್ಸಿಂಗ್​'ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನವು ಚಂದ್ರನ ಮೇಲ್ಮೆ ಮೇಲೆ ಇಳಿಯುವುದರಿಂದಾಗುವ ಪರಿಣಾಮ ಕುರಿತು ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries