ಕಾಸರಗೋಡು: 70ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾಸರಗೋಡು ಸರ್ಕಲ್ ಮಟ್ಟದಲ್ಲಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು (ಕನ್ನಡ ಮತ್ತು ಮಲಯಾಳ) ಕಾಸರಗೋಡು ವೃತ್ತ ಸಹಕಾರಿ ಯೂನಿಯನ್ ವತಿಯಿಂದ ಆಯೋಜಿಸುತ್ತಿದೆ.
ಅಕ್ಟೋಬರ್ 21 ರಂದು ವಿದ್ಯಾನಗರ ಸಹಕಾರಿ ಭವನ ಸಭಾಂಗಣದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಶಾಲಾ ದಾಖಲೆಗಳೊಂದಿಗೆ ಅಂದು ಬೆಳಗ್ಗೆ 10ಕ್ಕೆ ವಿದ್ಯಾನಗರದ ಸಹಕಾರ ಭವನಕ್ಕೆ ತಲುಪುವಂತೆ ಪ್ರಕಟಣೆ ತಿಳಿಸಿದೆ.