ಕಾಸರಗೋಡು : ಸೇವಾಭಾರತಿ ಕಾಸರಗೋಡು, ಶ್ರೀ ಶಾರದಾ ಮಹೋತ್ಸವ ಸಮಿತಿ ಕಾಸರಗೋಡು ಹಾಗೂ ಕಾಸರಗೋಡು ಸರ್ಕಾರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಅಕ್ಟೋಬರ್ 21ರಂದು ಬೆಳಗ್ಗೆ 9ರಿಂದ 12ರ ತನಕ ಕಾಸರಗೋಡಿನ ದ್ವಾರಕಾ ನಗರದ ಶ್ರೀಕೃಷ್ಣ ಮಂದಿರದ(ಮುರಲಿ ಮುಕುಂದ ಸಭಾಂಗಣದ ಹಿಂಭಾಗ) ಪರಿಸರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. 'ರಕ್ತದಾನ ಮಾಡಿ ಒಂದು ಜೀವ ಉಳಿಸಲು ಪ್ರಯತ್ನಿಸೋಣ' ಎಂಬ ಸಂದೇಶದೊಂದಿಗೆ ಸೇವಾ ಭಾರತಿ ಕಾಸರಗೋಡು ರಕ್ತದಾನ ಶೀಬಿರ ಆಯೋಜಿಸಿದೆ.