ಮುಂಬೈ: ನಗರದಲ್ಲಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕಾಣೆಯಾಗಿದ್ದ 22 ಮಕ್ಕಳು ಅವರ ಕುಟುಂಬವನ್ನು ಮತ್ತೆ ಕೂಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮುಂಬೈ: ನಗರದಲ್ಲಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕಾಣೆಯಾಗಿದ್ದ 22 ಮಕ್ಕಳು ಅವರ ಕುಟುಂಬವನ್ನು ಮತ್ತೆ ಕೂಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗಣೇಶೋತ್ಸವ ವಿಸರ್ಜನೆಯ ಸಂದರ್ಭದಲ್ಲಿ ಲಕ್ಷಾಂತರ ಮಂದಿ ನದಿ ತೀರದಲ್ಲಿ ಜಮಾವಣೆಗೊಂಡಿದ್ದರು.
7 ರಿಂದ 14 ವರ್ಷದ ಒಳಗಿನ ಒಟ್ಟು 22 ಮಕ್ಕಳು ಗಣೇಶನ ವಿಸರ್ಜನೆಯ ವೇಳೆ ಗುರುವಾರ (ಸೆಪ್ಟೆಂಬರ್ 28) ಕಾಣೆಯಾಗಿದ್ದರೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು ಎಂದರು.
ದೂರಿನ ಆಧಾರದ ಮೇಲೆ ವಿಶೇಷ ತಂಡಗಳನ್ನು ರಚಿಸಿ, ಮೈಕ್‌ಗಳು ಅಳವಡಿಸಿದ ವಾಹನಗಳಲ್ಲಿ ಘೋಷಣೆ ಕೂಗುತ್ತಾ ಪೊಲೀಸರು ಕಾಣೆಯಾಗಿದ್ದ ಮಕ್ಕಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೊನೆಗೆ 22 ಮಕ್ಕಳನ್ನು ಪತ್ತೆ ಹಚ್ಚಿದ ಪೊಲೀಸರು ಅವರ ಕುಟುಂಬಗಳಿಗೆ ಮರಳಿ ಸೇರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವುದಾಗಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.