ಮೈನ್: ಅಮೆರಿಕದ ಮೈನ್ ರಾಜ್ಯದ ಲೆವಿಸ್ಟನ್ ನಗರದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 22 ಜನರು ಸಾವಿಗೀಡಾಗಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಮೈನ್: ಅಮೆರಿಕದ ಮೈನ್ ರಾಜ್ಯದ ಲೆವಿಸ್ಟನ್ ನಗರದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 22 ಜನರು ಸಾವಿಗೀಡಾಗಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಈ ಮಧ್ಯೆ, ನಿವಾಸಿಗಳು ಮನೆಯಿಂದ ಹೊರಬರದಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಮೈನ್ ರಾಜ್ಯದ ಎರಡನೇ ಅತಿದೊಡ್ಡ ನಗರ ಮತ್ತು ಪೋರ್ಟ್‌ಲ್ಯಾಂಡ್‌ನಿಂದ ಉತ್ತರಕ್ಕೆ 36 ಮೈಲುಗಳಷ್ಟು ದೂರದಲ್ಲಿರುವ ಲೆವಿಸ್ಟನ್‌ನಲ್ಲಿ ಶಂಕಿತ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಂಡ್ರೊಸ್ಕೊಗಿನ್ ಕೌಂಟಿ ಪೊಲೀಸರು ಶಂಕಿತನ ಎರಡು ಛಾಯಾಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಫೈರಿಂಗ್ ಭಂಗಿಯಲ್ಲಿ ರೈಫಲ್ ಹಿಡಿದಿರುವ ಉದ್ದ ತೋಳಿನ ಶರ್ಟ್ ಮತ್ತು ಜೀನ್ಸ್ ಧರಿಸಿರುವ ಗಡ್ಡಧಾರಿ ದಾಳಿಕೋರನನ್ನು ಗುರುತಿಸಲು ಕೌಂಟಿ ಪೊಲೀಸರು ಸಾರ್ವಜನಿಕರ ಸಹಾಯವನ್ನು ಕೋರಿದ್ದಾರೆ.
ಲೆವಿಸ್ಟನ್‌ನಲ್ಲಿರುವ ಸೆಂಟ್ರಲ್ ಮೈನ್ ವೈದ್ಯಕೀಯ ಕೇಂದ್ರವು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದೆ..