ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಕಾರ್ಮಾರು ಮಹಾವಿಷ್ಣು ಕ್ಷೇತ್ರದ ಗರ್ಭಗುಡಿಯ ದಾರಂದ ಮಹೂರ್ತ ಕಾರ್ಯಕ್ರಮಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಕ್ಷೇತ್ರ ತಂತ್ರಿವರ್ಯರಾದ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಅಕ್ಟೋಬರ್ 22 ಭಾನುವಾರ ಜರುಗಲಿರುವುದು.
ಅಂದು ಬೆಳಗ್ಗೆ 9:00 ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ ನಂತರ 11.08ರಿಂದ 12.04ರ ಧನುರ್ಲಗ್ನ ಮುಹೂರ್ತದಲ್ಲಿ ಮಹಾವಿಷ್ಣು ದೇವರ ಗರ್ಭಗುಡಿಗೆ ದಾರಂದ ಇಡುವುದು ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳವರು ಆಶೀರ್ವಚನ ನೀಡಲಿರುವರು. ಮಂಗಳೂರಿನ ಉದ್ಯಮಿ ಮಧುಸೂದನ ಆಯರ್, ನಾರಾಯಣ ಮಾಸ್ಟರ್ ಚರ್ಲಡ್ಕ, ಡಾಕ್ಟರ್ ನಾಗರಾಜ ಭಟ್ ಕಾಸರಗೋಡು, ಉದ್ಯಮಿ ರಾಮ್ ಪ್ರಸಾದ್ ಕಾಸರಗೋಡು, ಗೋಪಾಲಕೃಷ್ಣ ಕುಲಾಲ್ ವಾಂತಿಚಾಲು, ಉದಯ ಚೆಟ್ಟಿಯಾರ್ ಬಜಕೂಡ್ಲು ಉಪಸ್ಥಿತರಿರುವರು.