ಮಲಪ್ಪುರಂ: ಸಿಪಿಎಂ ಮುಖಂಡ ಕೆ. ಅನಿಲ್ ಕುಮಾರ್ ಅವರು ಮಲಪ್ಪುರಂನ ಮುಸ್ಲಿಂ ಹುಡುಗಿಯರನ್ನು ಅವಮಾನಿಸುವ ಭಾಷಣವನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ಕೇರಳ ಮುಸ್ಲಿಂ ಜಮಾತ್ ಆಗ್ರಹಿಸಿದೆ. ಈ ಬಗ್ಗೆ ಕೇರಳ ಮುಸ್ಲಿಂ ಜಮಾತ್ ಮಲಪ್ಪುರಂ ಜಿಲ್ಲಾ ಸಮಿತಿ ಮನವಿ ಮಾಡಿದೆ.
ಮೊನ್ನೆ ತಿರುವನಂತಪುರದ ನಿಶಾಗಂಧಿ ಸಭಾಂಗಣದಲ್ಲಿ ಮಾನವೀಯತೆಯ ವಿರೋಧಿ ಮೂಲಭೂತವಾದಿ ನವ ಉದಾರವಾದಿ ಫ್ಯಾಸಿಸ್ಟ್ ಪ್ರಚಾರಕ ರವಿಚಂದ್ರನ್ ನೇತೃತ್ವದಲ್ಲಿ ಎಸ್ಸೆನ್ಸ್ ನಡೆಸಿದ ಲಿಟ್ಮಸ್ ಕಾರ್ಯಕ್ರಮದಲ್ಲಿ ಮಲಪ್ಪುರಂ ಜಿಲ್ಲೆಯ ಮುಸ್ಲಿಂ ಹೆಣ್ಣುಮಕ್ಕಳ ಧಾರ್ಮಿಕ ಉಡುಗೆಯನ್ನು ಸಾರ್ವಜನಿಕವಾಗಿ ಅವಮಾನಿಸಿ ಮಾಡಿದ ಭಾಷಣ ಭಾರೀ ಟೀಕೆಗೊಳಗಾಗಿತ್ತು. ಕಮ್ಯುನಿಸ್ಟ್ ಪಕ್ಷವು ಮುಸ್ಲಿಮ್ ಸಮುದಾಯಕ್ಕೆ ಸವಾಲಾಗಿದೆ. ಇದನ್ನು ಅಲ್ಲಗಳೆಯಲು ಮತ್ತು ಸಾರ್ವಜನಿಕವಾಗಿ ಸರಿಪಡಿಸಲು ಸಿಪಿಎಂ ಸಿದ್ಧವಾಗಬೇಕು ಎಂದು ಸಮಿತಿ ಹೇಳಿದೆ.
'ಮಲಪ್ಪುರಂನಿಂದ ಬರುವ ಹೊಸ ಹುಡುಗಿಯರನ್ನು ನೀವು ನೋಡಿ. ಮಲಪ್ಪುರಂನಲ್ಲಿ ಕಮ್ಯುನಿಸ್ಟ್ ಪಕ್ಷದವರು ಬಂದ ಬಳಿಕ ಅಲ್ಲಿ ತಲೆಗೆ ಬಟ್ಟೆ ಹೊದೆದು ತೆರಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬದಲಾವಣೆಗಳು ಶಿಕ್ಷಣದ ಭಾಗವಾಗಿ ಬಂದವು. ಸ್ವತಂತ್ರ ಚಿಂತನೆಯ ಹೊರಹೊಮ್ಮುವಿಕೆಯಲ್ಲಿ ಕಮ್ಯುನಿಸ್ಟ್ ಚಳವಳಿಯ ಪಾತ್ರ ಸಣ್ಣದಲ್ಲ,'' ಎಂದು ವಿಚಾರವಾದಿ ಸಂಘಟನೆ ಎಸೆನ್ಸ್ ಗ್ಲೋಬಲ್ ಆಯೋಜಿಸಿದ್ದ 'ಲಿಟಮಸ್ 23' ನಾಸ್ತಿಕ ಸಮಾವೇಶದಲ್ಲಿ ಸಿಪಿಎಂ ಮುಖಂಡ ಅಡ್ವ.ಅನಿಲ್ ಕುಮಾರ್ ತಿಳಿಸಿದ್ದರು.
ಇದಕ್ಕೂ ಮುನ್ನ ಕೆ.ಟಿ.ಜಲೀಲ್ ಹಾಗೂ ಮುಸ್ಲಿಂ ಲೀಗ್ ಮುಖಂಡ ಕೆ.ಪಿ.ಎ.ಮಜೀದ್ ಅವರು ಘಟನೆಯನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದರು.