ಪೆರ್ಲ: ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ವತಿಯಿಂದ 23ನೇ ವರ್ಷದ ಶ್ರೀಶಾರದಾ ಪೂಜಾ ಮಹೋತ್ಸವ ಅ. 23 ಹಾಗೂ 24ರಂದು ಯಕ್ಷಗಾನ ಕಲಾ ಕೇಂದ್ರದಲ್ಲಿ ಜರುಗಲಿರುವುದು.
ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹಾಗೂ ಎಡನೀರು ಶ್ರೀ ಸಚ್ಚಿದನಂದ ಭಾರತೀ ಸ್ವಾಮೀಜಿ ಅವರ ಕೃಪಾಶೀರ್ವಾದಗಳೊಂದಿಗೆ ಕಾರ್ಯಕ್ರಮ ಜರುಗಲಿರುವುದು. 23ರಂದು ಬೆಳಗ್ಗೆ ಶ್ರೀ ಶಾರದ ಪ್ರತಿಷ್ಠೆ, ಭಜನೆ, 10.30ಕ್ಕೆ ತೆಂಕಬೈಲು ಸ್ಮøತಿಭವನದ ಶಿಲಾನ್ಯಾಸ ಸಮಾರಂಭ ನಡೆಯುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯುವುದು. ಖ್ಯಾತ ವಕೀಲ ಎಂ. ನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. 11.30ಕ್ಕೆ ಹರಿಕತೆ, ಮಧ್ಯಾಹ್ನ ಮಹಾಪೂಜೆ, ನಂತರ ಯಕ್ಷಗಾನ ಪೂರ್ವರಂಗ, 3ಗಂಟೆಗೆ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯುವುದು.
24ರಂದು ಬೆಳಗ್ಗೆ 9.30ಕ್ಕೆ ಭಜನೆ, ಅಕ್ಷರಾಭ್ಯಾಸ, 11ಕ್ಕೆ ಗಾನ ವೈಭವ, ಪೂರ್ವರಂಗ, ಕೇಂದ್ರದ ವಿದ್ಯಾರ್ಥಿಗಳಿಂದಯಕ್ಷಗಾನ ಬಯಲಾಟ ಜರುಗಲಿರುವುದು.