HEALTH TIPS

ಉತ್ತರಪ್ರದೇಶ: ಛತ್ತೀಸ್ ಗಢ ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣ; 24 ಪೊಲೀಸರಿಗೆ 10 ವರ್ಷ ಜೈಲು

            ಲಕ್ನೋ: 2010ರಲ್ಲಿ ಛತ್ತೀಸ್‌ಗಢದಲ್ಲಿ ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಂಪುರದ ವಿಶೇಷ ನ್ಯಾಯಾಲಯವು ಶುಕ್ರವಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಇಬ್ಬರು ಸಿಬ್ಬಂದಿ ಮತ್ತು 22 ಪೊಲೀಸರು ಸೇರಿದಂತೆ 24 ಪೊಲೀಸ್ ಸಿಬ್ಬಂದಿಗೆ ತಲಾ 10,000 ರೂ.ಗಳ ದಂಡದೊಂದಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

            2010ರ ಏಪ್ರಿಲ್‌ನಲ್ಲಿ ಛತ್ತೀಸ್‌ಗಢದ ದಾಂತೇವಾಡದಲ್ಲಿ 76 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದರು ಮತ್ತು ಎಂಟು ಮಾವೋವಾದಿಗಳು ಹತರಾಗಿದ್ದರು. ವಿಶೇಷ ನ್ಯಾಯಾಧೀಶ (ಇಸಿ ಆಕ್ಟ್) ವಿಜಯ್ ಕುಮಾರ್ ನ್ಯಾಯಾಲಯವು ಗುರುವಾರ ಆರೋಪಿಗಳನ್ನು ಅಪರಾಧಿ ಎಂದು ಘೋಷಿಸಿತ್ತು. 22 ಸಿಬ್ಬಂದಿಗಳಲ್ಲಿ ಹೆಚ್ಚಿನವರು ಉತ್ತರ ಪ್ರದೇಶ  ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ಗೆ ಸೇರಿದವರು. ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ವಿಚಾರಣೆಯ ವೇಳೆ ಪ್ರಮುಖ ಆರೋಪಿ ಸಾವನ್ನಪ್ಪಿದ್ದಾನೆ.

             ಶಸ್ತ್ರಾಸ್ತ್ರ ಪೂರೈಕೆ ಪ್ರಕರಣವು ರಾಂಪುರ ಕಾರ್ಟ್ರಿಡ್ಜ್ ಹಗರಣ ಎಂದೇ ಕುಖ್ಯಾತಿ ಪಡೆದಿದೆ. ಈ ಪ್ರಕರಣದಲ್ಲಿ ಇಸಿ ಕಾಯ್ದೆಯ ವಿಶೇಷ ನ್ಯಾಯಾಲಯವು 24 ಆರೋಪಿಗಳನ್ನು ದೋಷಿ ಎಂದು ಗುರುವಾರ ತೀರ್ಪು ನೀಡಿತ್ತು. ಎಲ್ಲರಿಗೂ ಶಿಕ್ಷೆ ಪ್ರಮಾಣ ಪ್ರಕಟಿಸಿರುವ ಕೋರ್ಟ್​, ತಲಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದಲ್ಲದೇ ತಲಾ 10 ಸಾವಿರ ರೂ.ಗಳ ದಂಡ ಹಾಕಿದೆ. ಇವರಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕಾನ್‌ಸ್ಟೆಬಲ್‌ಗಳೂ ಸೇರಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಪ್ರಮುಖ ಆರೋಪಿ ಮೃತಪಟ್ಟಿದ್ದಾನೆ.

                  ರಾಂಪುರದ ಕಾರ್ಟ್ರಿಡ್ಜ್ ಕಮಿಷನರ್ ಸ್ಟೋರ್‌ನಿಂದ (ಸಿಡಬ್ಲ್ಯೂಎಸ್) 2010ರಲ್ಲಿ ಕಾರ್ಟ್ರಿಡ್ಜ್‌ಗಳನ್ನು ಅಕ್ರಮವಾಗಿ ಹೊರಗೆ ಸಾಗಿಸುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಮೊದಲ ಬಾರಿಗೆ ಮೂವರು ಆರೋಪಿಗಳನ್ನು ಎಸ್‌ಟಿಎಫ್ ತಂಡ ಬಂಧಿಸಿತ್ತು. ನಂತರ ಹಲವು ಆರೋಪಿಗಳು ಪರಸ್ಪರ ಇತರರ ಹೆಸರಗಳನ್ನು ಬಹಿರಂಗಪಡಿಸಿದ್ದರು.

                ಆರಂಭದಲ್ಲಿ ನಿವೃತ್ತ ಇನ್ಸ್‌ಪೆಕ್ಟರ್​ ಯಶೋದಾ ನಂದ್ ಅವರನ್ನು ಬಂಧಿಸಲಾಗಿತ್ತು. ಇದಲ್ಲದೆ, ಸಿಆರ್‌ಪಿಎಫ್‌ನಲ್ಲಿ ನಿಯೋಜನೆಗೊಂಡಿದ್ದ ವಿನೋದ್ ಪಾಸ್ವಾನ್ ಮತ್ತು ವಿನೇಶ್ ಕುಮಾರ್ ಕೂಡ ಸಿಕ್ಕಿಬಿದ್ದಿದ್ದರು. ಈ ಮೂವರು ಆರೋಪಿಗಳಿಂದ ಇನ್ಸಾಸ್ ರೈಫಲ್, ಎರಡೂವರೆ ಕ್ವಿಂಟಲ್ ಕಿಯೋಸ್ಕ್ ಹಾಗೂ 1.76 ಲಕ್ಷ ರೂ. ವಶಕ್ಕೆ ಪಡೆಯಲಾಗಿತ್ತು. ಈ ಆರೋಪಿಗಳು ನಕ್ಸಲರಿಗೆ ಕಾಟ್ರಿಡ್ಜ್‌ಗಳನ್ನು ಪೂರೈಸುತ್ತಿದ್ದರು ಎಂದು ತನಿಖೆಯಲ್ಲಿ ಬಯಲಾಗಿತ್ತು.

                    ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮೊರಾದಾಬಾದ್, ಬಸ್ತಿ, ಗೊಂಡಾ, ವಾರಣಾಸಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ, ದಾಂತೇವಾಡದಲ್ಲಿ ನಡೆದ ದಾಳಿಗೆ ರಾಂಪುರದ ಸಿಡಬ್ಲ್ಯೂಎಸ್​ನಿಂದ ನಕ್ಸಲೀಯರಿಗೆ ಕಾಟ್ರಿಡ್ಜ್‌ಗಳನ್ನು ಸರಬರಾಜು ಮಾಡಿದ್ದರು. ಕಾರ್ಟ್ರಿಡ್ಜ್ ಪೂರೈಕೆಗಾಗಿ ಹಣ ವಹಿವಾಟುಗಳನ್ನು ಬ್ಯಾಂಕುಗಳ ಮೂಲಕ ಮಾಡಲಾಗುತ್ತಿತ್ತು ಖಚಿತವಾಗಿತ್ತು. ಈ ಕುರಿತು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಲಾಗಿತ್ತು. ಇದೀಗ 13 ವರ್ಷಗಳ ನಂತರ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಶಿಕ್ಷೆಗೆ ಗುರಿಯಾಗುತ್ತಿದ್ದಂತೆ ಎಲ್ಲ ಅಪರಾಧಿಗಳು ನ್ಯಾಯಾಲಯದ ಆವರಣದಿಂದ ತಮ್ಮ ಮುಖ ಮುಚ್ಚಿಕೊಂಡು ಹೊರಬರುವುದು ಕಂಡುಬಂತು.


    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries