HEALTH TIPS

24 ವರ್ಷಗಳ ಹಿಂದೆ ಪಾಕ್‌ನಿಂದ ಭಾರತಕ್ಕೆ ಬಂದು ಇಲ್ಲಿನ ಪೌರತ್ವ ಪಡೆದಿದ್ದ ವ್ಯಕ್ತಿಯಿಂದ ಬೇಹುಗಾರಿಕೆ, ಬಂಧನ!

Top Post Ad

Click to join Samarasasudhi Official Whatsapp Group

Qries

               ಗುಜರಾತ್ :  ಗುಜರಾತ್ ಎಟಿಎಸ್ ತಾರಾಪುರದಲ್ಲಿ ಪಾಕಿಸ್ತಾನದ ಬೇಹುಗಾರನನ್ನು ಬಂಧಿಸಿದೆ. ಆತನ ಬಂಧನದ ನಂತರ ಆತನ ರಹಸ್ಯಗಳನ್ನು ಬಹಿರಂಗಪಡಿಸಲು ವಿಚಾರಣೆ ನಡೆಸಲಾಗುತ್ತಿದೆ. 

             ಪೆÇಲೀಸರ ಪ್ರಕಾರ, ಆರೋಪಿ ಲಾಭಶಂಕರ್ ಮಹೇಶ್ವರಿ ಮೂಲತಃ ಪಾಕಿಸ್ತಾನಿ ಹಿಂದೂ. 1999ರಲ್ಲಿ ತನ್ನ ಹೆಂಡತಿಯೊಂದಿಗೆ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದನು. ಆರಂಭದಲ್ಲಿ ಆತ ತಾರಾಪುರದಲ್ಲಿರುವ ಅತ್ತೆಯ ಮನೆಯಲ್ಲಿ ತಂಗಿದ್ದರು. ಅಲ್ಲಿ ಹಲವಾರು ಅಂಗಡಿಗಳನ್ನು ತೆರೆದು ಒಳ್ಳೆಯ ವ್ಯಾಪಾರ ಮಾಡುತ್ತಿದ್ದರು.

               2006ರಲ್ಲಿ ಲಾಭಶಂಕರ್ ಭಾರತದ ಪೌರತ್ವ ಪಡೆದರು. ಇದರ ನಂತರ ಅವರು 2022ರ ಆರಂಭದಲ್ಲಿ ತನ್ನ ಪೆÇೀಷಕರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದರು. ವೀಸಾ ಪ್ರಕ್ರಿಯೆಯಲ್ಲಿ ಮತ್ತು ಅವರ ಪೆÇೀಷಕರ ಮನೆಯಲ್ಲಿ ಒಂದೂವರೆ ತಿಂಗಳು ಇದ್ದಾಗ ಅಲ್ಲಿ ಬ್ರೈನ್ ವಾಶ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಂದಿನಿಂದ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದಾರೆ.

              ವಾಟ್ಸಾಪ್ ಖಾತೆಯನ್ನು ರಚಿಸಿದ ನಂತರ ಆರೋಪಿಯು ಪಾಕಿಸ್ತಾನಕ್ಕೆ ಸಿಮ್ ಕಾರ್ಡ್ ಕಳುಹಿಸಿದ್ದ ಮತ್ತು ಅದಕ್ಕೆ ಪ್ರತಿಯಾಗಿ ಹಣ ಪಡೆದಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ. ಎಂಐ, ಗುಜರಾತ್ ಎಟಿಎಸ್ ಮತ್ತು ಏರ್ ಫೆÇೀರ್ಸ್ ಇಂಟೆಲಿಜೆನ್ಸ್ ಇದನ್ನು ದೊಡ್ಡ ಯಶಸ್ಸು ಎಂದು ಪರಿಗಣಿಸುತ್ತಿವೆ.

             ಪೆÇಲೀಸರ ಪ್ರಕಾರ, ಆಗಸ್ಟ್ 15ರ ಮೊದಲು, ವಾಟ್ಸಾಪ್ ಸಂಖ್ಯೆಯ ಮೂಲಕ, ಭದ್ರತಾ ಪಡೆಗಳ ಸಿಬ್ಬಂದಿಯ ಆಂಡ್ರಾಯ್ಡ್ ಮೊಬೈಲ್ ಹ್ಯಾಂಡ್‍ಸೆಟ್‍ಗಳಲ್ಲಿ 'ಹರ್ ಘರ್ ತಿರಂಗ ಅಭಿಯಾನ' ಹೆಸರಿನಲ್ಲಿ 'ಚಿಠಿಞ' ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡುವಂತೆ ಸಂದೇಶ ಬಂದಿತ್ತು. ಇದಲ್ಲದೆ, ಜನರು ತಮ್ಮ ಮಗುವಿನೊಂದಿಗೆ ರಾಷ್ಟ್ರಧ್ವಜದ ಚಿತ್ರವನ್ನು ಅಪ್‍ಲೋಡ್ ಮಾಡಬೇಕು ಎಂದು ಸೇನಾ ಶಾಲೆಗಳ ಅಧಿಕಾರಿಗಳನ್ನು ಅನುಕರಿಸುವ ಮೂಲಕ ಆ ಸಂಖ್ಯೆಗಳಿಗೆ ಸಂದೇಶಗಳನ್ನು ಕಳುಹಿಸಲಾಗಿದೆ.

          ಆರೋಪಿ ಲಾಭಶಂಕರ್ ಮಹೇಶ್ವರಿ ಈ ಭಾರತೀಯ ನಂಬರ್ ಅನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗೆ ನೀಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯ ಮೊಬೈಲ್‍ನ ಫೆÇರೆನ್ಸಿಕ್ ತನಿಖೆಯಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಜನರು ಈ ವಾಟ್ಸಾಪ್ ಸಂಖ್ಯೆಯನ್ನು ಬಳಸುತ್ತಿದ್ದರು. ಅವರ ಮೊಬೈಲ್‍ಗಳಿಂದ ಗುಪ್ತಚರ ಮಾಹಿತಿಯನ್ನು ಪಡೆಯಲು ಭದ್ರತಾ ಸಿಬ್ಬಂದಿಯ ಮೊಬೈಲ್‍ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.


               ಪಾಕಿಸ್ತಾನಿ ಏಜೆನ್ಸಿ ಆರ್ಮಿ ಪಬ್ಲಿಕ್ ಸ್ಕೂಲ್(ಎಪಿಎಸ್) ವೆಬ್‍ಸೈಟ್ ಅಥವಾ ಆಂಡ್ರಾಯ್ಡ್ ಅಪ್ಲಿಕೇಶನ್ 'ಡಿಜಿಕ್ಯಾಂಪ್ಸ್' ಶುಲ್ಕವನ್ನು ಠೇವಣಿ ಮಾಡಲು ಬಳಸುವ ಶಂಕೆ ಇದೆ. ಆ ಮೂಲಕ ಎಪಿಎಸ್ ವಿದ್ಯಾರ್ಥಿಗಳು ಹಾಗೂ ಅವರ ಪೆÇೀಷಕರಿಗೆ ಸಂಬಂಧಿಸಿದ ಮಾಹಿತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಂPS ಎಂಬುದು ಭಾರತೀಯ ಸೇನೆಯ ಸಹಯೋಗದೊಂದಿಗೆ ಖಾಸಗಿ ಸಂಸ್ಥೆಯಾದ ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿ (ಂWಇS) ಅಡಿಯಲ್ಲಿ ಬರುವ ಶಾಲೆಗಳಾಗಿವೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries